2
Pakistan: ಆಪರೇಷನ್ ಸಿಂಧೂರ್’ ದಾಳಿಗೆ ಬಲಿಯಾದ ಉಗ್ರ ಮಸೂದ್ ಕುಟುಂಬಕ್ಕೆ ಪಾಕ್ (Pakistan) ಸರ್ಕಾರ 14 ಕೋಟಿ ಪರಿಹಾರ ನೀಡಿದೆ ಎಂದು ಮೂಲಗಳು ತಿಳಿಸಿದೆ.
ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಉಗ್ರ ಮಸೂದ್ ಕುಟುಂಬದ 10 ಮಂದಿ ಸೇರಿ ಒಟ್ಟು 14 ಮಂದಿ ಬಲಿಯಾಗಿದ್ದಾರೆ. ಮಸೂದ್ ಅಝರ್ ಸಹೋದರ , ಸಹೋದರಿ ಸೇರಿ 14 ಮಂದಿ ಬಲಿಯಾಗಿದ್ದರು.
ದಾಳಿಯಲ್ಲಿ ಮೃತಪಟ್ಟ ಉಗ್ರರ ಕುಟುಂಬಕ್ಕೆ ಪಾಕ್ ಸರ್ಕಾರ ತಲಾ 1ಕೋಟಿ ಪರಿಹಾರವನ್ನು ಪಾಕಿಸ್ತಾನ ಸರ್ಕಾರ ನೀಡಿದೆ. ಪಾಕ್ ಸರ್ಕಾರ ಐಎಮ್‌ಎಫ್ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಗೂ ಉಗ್ರ ಮಸೂದ್ ಅಜರ್ ಮನೆ ನಿರ್ಮಾಣಕ್ಕೆ ಪಾಪಿ ಪಾಕಿಸ್ತಾನ ನೆರವು ನೀಡುತ್ತಿದೆ. ಈ ಮೂಲಕ ಪಾಕಿಸ್ತಾನದ ಮತ್ತೊಂದು ಅಸಲಿ ಮುಖ ಬಯಲಾಗಿದೆ.
