1
Bengaluru: ಬೆಂಗಳೂರಿನಲ್ಲಿ ಆಟೋದವರು ದುಪ್ಪಟ್ಟು ಬಾಡಿಗೆ ಹೇಳುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಆರ್ ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದ 15 ಆಟೋಗಳನ್ನು ಸೀಜ್ ಮಾಡಲಾಗಿದೆ.
ಕಳೆದ ಮೂರು ವರ್ಷಗಳಿಂದ ಆಟೋ ಚಾಲಕರು ದರ ಏರಿಕೆ ಮಾಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದಾರೆ. ಒಂದು ವೇಳೆ ದರ ಹೆಚ್ಚಳ ಮಾಡಲು ಸೂಚನೆ ನೀಡಿದಲ್ಲಿ, ಮಿನಿಮಮ್ ದರ 36 ರೂ. ಆಗಲಿದೆ ಹಾಗೂ ಪ್ರತಿ ಕಿ.ಮೀ ಗೆ 18 ರೂ ಹೆಚ್ಚಾಗಲಿದೆ.
