Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆರೆಮನೆಗೆ ಕಳುಹಿಸಲ್ಪಟ್ಟಿರುವ ನಟ ದರ್ಶನ್‌ಗೆ ಈಗ 15 ಜನ ಅಧಿಕಾರಿ ಸಿಬ್ಬಂದಿಯಿಂದ 24 ತಾಸು ಭದ್ರತೆ ಕಲ್ಪಿಸಲಾಗುತ್ತಿದೆ.
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ಆರೋಪಿಯಾಗಿ ಜೈಲಲ್ಲಿರುವ ದರ್ಶನ್‌ಗೆ ದಿನದ 24 ಗಂಟೆಯೂ ಪೊಲೀಸ್ ಅಧಿಕಾರಿಗಳ ಭದ್ರತೆ ಕಲ್ಪಿಸಲಾಗಿದೆ. ಎಎಸ್‌ಪಿ ನೇತೃತ್ವದಲ್ಲಿ ಐವರು ಸಿಬ್ಬಂದಿಯ ನೇಮಕವಾಗಿದ್ದು, ಹದಿನೈದು ಜನ ಅಧಿಕಾರಿ ಸಿಬ್ಬಂದಿಯಿಂದ ದರ್ಶನ್ ಗೆ ಭದ್ರತೆ ನೀಡಲಾಗುತ್ತಿದೆ. ಮೂರು ಶಿಫ್ಟ್ ಗಳಂತೆ ಒಂದೊಂದು ಶಿಫ್ಟ್ ಗೆ ಐವರು ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗಿದೆ.
ಇನ್ನು ಬ್ಯಾರಕ್‌ನ ಹೊರಭಾಗದ ಕಾರಿಡಾರ್‌ನಲ್ಲಿ ವಾಕ್ ಮಾಡಲು ಅನುಮತಿ ಸಿಕ್ಕಿದೆ. ಈ ಸಮಯದಲ್ಲಿ ಬೇರೆ ವಿಚಾರಣಾಧೀನಾ ಕೈದಿಗಳು ವಾಕ್ ಮಾಡುವಂತಿಲ್ಲ. ದರ್ಶನ್ ವಾಕ್ ಮುಗಿದ ನಂತರವಷ್ಟೇ ಇತರರು ವಾಕ್ ಮಾಡಬಹುದಾಗಿದೆ. ವಾಕಿಂಗ್ ಸೇರಿದಂತೆ ಸೆಲ್‌ನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಸಿಸಿಟಿವಿಯಲ್ಲಿ ದಾಖಲಾಗುವಂತೆ ವ್ಯವಸ್ಥೆ ಮಾಡಲಾಗಿದೆ.
