Home » Tumakuru: ಮುಟ್ಟಿನ ನೋವು ತಾಳಲಾರದೆ 19ರ ಯುವತಿ ಆತ್ಮಹತ್ಯೆ!!

Tumakuru: ಮುಟ್ಟಿನ ನೋವು ತಾಳಲಾರದೆ 19ರ ಯುವತಿ ಆತ್ಮಹತ್ಯೆ!!

0 comments

Tumakuru : ಋತುಚಕ್ರದ (Menstruation) ಸಂದರ್ಭದಲ್ಲಿ ಹೆಣ್ಣು ಅನುಭವಿಸೋ ನೋವು ಆಕೆಗೆ ಮಾತ್ರ ಗೊತ್ತು. ಆದರೂ ಕೂಡ ಅದನ್ನು ತೋರ್ಪಡಿಸದೆ ಆಕೆ ಎಲ್ಲವನ್ನು ನಿಭಾಯಿಸುತ್ತಾಳೆ. ಆದರೆ ಇದೀಗ ಋತುಚಕ್ರದ ಹೊಟ್ಟೆ ನೊವು ತಾಳಲಾಗದೆ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ತುಮಕೂರು ತಾಲೂಕಿನ ಬ್ಯಾತ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಗುಲ್ಬರ್ಗ ಮೂಲದ ಕೀರ್ತನಾ (19) ಎಂದು ಗುರುತಿಸಲಾಗಿದೆ. ಈಕೆ ಗುಲ್ಬರ್ಗದಿಂದ ಕೆಲಸ ಅರಸಿ ತುಮಕೂರಿನ ಬ್ಯಾತ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದಳು ಎನ್ನಲಾಗಿದೆ. ಆದ್ರೆ ಇನ್ನೂ ಕೆಲಸ ಸಿಗದ ಕಾರಣ ಚಿಕ್ಕಪ್ಪನ ಮನೆಯಲ್ಲಿಯೇ ನೆಲೆಸಿದ್ದಳು.  ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಮುಟ್ಟಿನ ಕಾಲದ ಹೊಟ್ಟೆ ನೋವಿನ ಕಾರಣಕ್ಕೆ ನೇಣಿಗೆ ಶರಣಾಗಿದ್ದಾಳೆ.ಎನ್ನಲಾಗಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like