Home » ಕೇವಲ 6 ಗಂಟೆಗಳಲ್ಲಿ 8 ಕೋಟಿ ಸಂಪಾದಿಸ್ತಾಳಂತೆ 19ರ ಈ ಬೆಡಗಿ! ಅವಳು ಮಾಡೋ ಕೆಲಸದ ಬಗ್ಗೆ ಕೇಳಿದ್ರೆ ನೀವೂ ಶಾಕ್!

ಕೇವಲ 6 ಗಂಟೆಗಳಲ್ಲಿ 8 ಕೋಟಿ ಸಂಪಾದಿಸ್ತಾಳಂತೆ 19ರ ಈ ಬೆಡಗಿ! ಅವಳು ಮಾಡೋ ಕೆಲಸದ ಬಗ್ಗೆ ಕೇಳಿದ್ರೆ ನೀವೂ ಶಾಕ್!

by ಹೊಸಕನ್ನಡ
0 comments

ಆಕೆ ಕೇವಲ 6 ಗಂಟೆಗಳಲ್ಲಿ ಸುಮಾರು 8 ಕೋಟಿ ಗಳಿಸುತ್ತಾಳಂತೆ! ಇವಳನ್ನು ನೋಡಲು ಜನರು ದುಡ್ಡು, ಡಾಲರ್ ಕೊಟ್ಟು ಮುಗಿಬೀಳುತ್ತಾರಂತೆ! ಯಾರೋ ವಿಶ್ವ ಸುಂದರಿಯೋ, ಸಿನೆಮಾ ನಟಿಯೋ ಈ ರೀತಿ ಹೇಳಿಕೊಂಡಿದ್ಧಾಳೆ ಎಂದು ಭಾವಿಸಬೇಡಿ. ಕೇವಲ 19 ವರ್ಷದ ಹುಡುಗಿಯೊಬ್ಬಳು ಹೀಗೆ ಹೇಳಿ ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದ್ದಾಳೆ. ಹೌದು, ಈ ಹುಡುಗಿ ಹೇಳುತ್ತಿರುವುದೆಲ್ಲವೂ ಸತ್ಯ! ಅದಕ್ಕೆ ಸಾಕ್ಷಿಯನ್ನೂ ತೋರಿಸಿದ್ದಾಳೆ. ಹಾಗಾದ್ರೆ ಈಕೆ ಮಾಡೋ ಕೆಲಸವಾದ್ರೂ ಏನು? ಆ ಕೆಲಸದಿಂದ ಅಷ್ಟೊಂದು ಸಂಪಾದನೆ ಸಾಧ್ಯಾನಾ? ಅನ್ನೋ ಕುತೂಹಲ ಕಾಡ್ತಿದಿಯಾ. ಹಾಗಾದ್ರೆ ಈ ಸ್ಟೋರಿ ನೋಡ್ಲೇಬೇಕು.

ಬದುಕಿನ ಬಂಡಿ ಸಾಗಿಸಲು ಎಲ್ಲರೂ ಒಂದೊಂದು ಕೆಲಸವನ್ನು ಅರಸಿ, ಅವಲಂಬಿಸಿರುತ್ತಾರೆ. ಅದರಲ್ಲಿ ಕೆಲವರ ಸಂಪಾದನೆ ಹೆಚ್ಚಿದ್ರೆ, ಕೆಲವರದ್ದು ಕಡಿಮೆ ಇರಬಹುದು. ಆದ್ರೆ, ಎಲ್ಲರೂ ಹಣ ಗಳಿಸಲು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ. ತಮ್ಮ ಸಂಪಾದನೆಯಲ್ಲಿ ತೃಪ್ತಿ ಕಾಣದವರು ಹೆಚ್ಚಿನ ಗಳಿಕೆಗಾಗಿ ಬೇರೆ ಬೇರೆ ಕೆಲಸಗಳತ್ತ ಮುಖಮಾಡುತ್ತಾರೆ. ಇದೇ ರೀತಿ ತನ್ನ ಗಳಿಕೆಯಲ್ಲಿ ಸಮಾಧಾನ ಕಾಣದ ಯುವತಿಯೊಬ್ಬಳು ಸಾಕಷ್ಟು ದುಡ್ಡುಗಳಿಸುವ ಮಾರ್ಗವೊಂದನ್ನು ಕಂಡುಕೊಂಡಿದ್ದಾಳೆ ಆದರದು ಎಲ್ಲದಕ್ಕೂ ವಿಭಿನ್ನವಾಗಿ! ವಿಭಿನ್ನ, ವಿಚಿತ್ರ, ವಿಲಕ್ಷಣಗಳನ್ನು ಮಾಡಿ ಹಣ ಗಳಿಸುವ ಈ ಹುಡುಗಿ 2021ರಲ್ಲೇ ವೈರಲ್ ಆಗಿದ್ದು, ಸದ್ಯ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾಳೆ.

ಯುಎಸ್ ಮೂಲದ ಈ ಹುಡುಗಿಯ ಹೆಸರು ಡೇನಿಯಲ್ ಬ್ರೆಗೊಲಿ. ಈಕೆ ವೃತ್ತಿಯಲ್ಲಿ ಮಾಡೆಲ್. ವಯಸ್ಸು ಕೇವಲ 19. ಈಗಾಗಲೇ ಕೋಟಿಗಟ್ಟಲೆ ಸಂಪತ್ತು ಮಾಡಿದ್ದೇನೆ ಎನ್ನುತ್ತಾಳೆ. ಆದರೆ ಅವಳಿಗೆ ಇಇದೆಲ್ಲವೂ ಸಾಧ್ಯವಾದದ್ದು ಸೋಷಿಯಲ್ ಮೀಡಿಯಾಗಳಿಂದ! ಬ್ರೆಗೋಲಿ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು Instagram ನಲ್ಲಿ 16.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇದರಿಂದಲೇ ಆಕೆಗೆ ಸಾಕಷ್ಟು ಹಣ ಸಿಗುತ್ತದೆ. ಜೊತೆಗೆ ಆಕೆ ವೈಯಕ್ತಿಕವಾಗಿಯೂ ತನ್ನ ಅಭಿಮಾನಿಗಳನ್ನು ಭೇಟಿಯಾಗ್ತಾಳಂತೆ. ಆದ್ರೆ ಅದಕ್ಕೆ ಬೇರೆಯೇ ಫೀಸ್ ಪಡೆಯುತ್ತಾಳಂತೆ.

ಆಕೆಯ ಫೋಟೋಗಳು ಮತ್ತು ವಿಡಿಯೋಗಳನ್ನು ವೀಕ್ಷಿಸಲು ಜನರು ಡಾಲರ್‌ ಗಳನ್ನು, ಹಣವನ್ನು ಪಾವತಿಸುತ್ತಾರಂತೆ. ನೇರ ನೇರವಾಗಿ ಮಾತನಾಡಲು ಪ್ರತ್ಯೇಕ ಶುಲ್ಕ ವಿಧಿಸಬೇಕಂತೆ. ಅಷ್ಟಕ್ಕೂ ಇದುವರೆಗೂ ಅವಳೇನು ಮಾತನಾಡುತ್ತಾಳೆ, ಏನು ಅಂತದ್ದು ಮೋಡಿ ಮಾಡುತ್ತಾಳೆ ಎಂಬುದಾಗಿ ಅವಳ ಫ್ಯಾನ್ಸ್ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ವಂತೆ! ಇಂದಿಗೂ ಹೊರಗೆ ಬಾರದೇ, ಕುತೂಹಲವಾಗಿಯೇ ಉಳಿದಿದೆ.

ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಗಳಿಕೆಯ ರಶೀದಿಯನ್ನು ಹಂಚಿಕೊಂಡಿರುವ ಬ್ರೆಗೊಲಿ, ತನ್ನನ್ನು ಫ್ಯಾಷನ್ ಐಕಾನ್ ಎಂದು ಪರಿಗಣಿಸಿದ್ದಾಳೆ, ತನ್ನ ಅಂದವನ್ನು ಯಾರಿಗೂ ಮೀರಿಸಲು ಆಗುವುದಿಲ್ಲ ಎಂದು ಹೇಳುತ್ತಾರೆ. ತನ್ನ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ಅವಳು ತನಗೆ ತಾನೇ ಕೊಟ್ಟುಕೊಳ್ಳುತ್ತಾಳೆ. ತನ್ನ ಎಲ್ಲಾ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾಳೆ. ಅವಳು ಚಿಕ್ಕ ವಯಸ್ಸಿನಿಂದಲೂ ಮಾಡೆಲ್​ ಆಗಿದ್ದಾಳೆ. ಅವಳು ಒಂದು ವರ್ಷದಲ್ಲಿ 52 ಮಿಲಿಯನ್ ಡಾಲರ್ ಗಳಿಸಿದ್ದಾಳೆ ಎಂದು ಹೇಳುತ್ತಾಳೆ.

ಏನೇ ಆಗಲಿ, ಈ ಬ್ರೆಗೋಲಿ ಲಕ್ಷಾಂತಲ ಹುಡುಗ್ರ ಹಾರ್ಟ್ ಕದ್ದಿದ್ದಂತು ಸತ್ಯ. ಇವಳಂದ್ರೆ ಅದೆಷ್ಟೋ ಹುಡುಗರ ಧಿಲ್​ ಜಲ್​ ಜಲ್​ ಅನ್ನುತ್ತೇನೋ. ಹೀಗಾಗಿಯೇ ಆಕೆ ದಿನೇ ದಿನೇ ಶ್ರೀಮಂತಳಾಗುತ್ತಾ ಇರೋದು. ಡಾಲರ್​ ಲೆಕ್ಕದಲ್ಲಿ ಆಕೆಯ ಖಾತೆ ಭರ್ತಿ ಆಗುತ್ತಾ ಇರೋದು. ಬ್ರೆಗೋಲಿ 6 ಗಂಟೆಗಳಲ್ಲಿ 8 ಕೋಟಿ ಗಳಿಸಿದೆ ಎಂದು ಓನ್ಲಿ ಫ್ಯಾನ್ಸ್ ವಕ್ತಾರರು ವೆರೈಟಿ ಡಾಟ್ ಕಾಮ್‌ಗೆ ಖಚಿತಪಡಿಸಿದ್ದಾರೆ. ಬ್ರೆಗೋಲಿ ತಾವು ಬೇಳಿದಂತೆ 2021ರಲ್ಲಿ ಗಳಿಸಿದ ಹಣದ ರಶೀದಿಯನ್ನು ಹಂಚಿಕೊಂಡಿದ್ದಾರೆ. ಈ ಸುದ್ಧಿ ಇದೀಗ ಸಖತ್​ ಸುದ್ಧಿಯಲ್ಲಿದೆ.

You may also like

Leave a Comment