8
Khandya: ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ದೇವರಲ್ಲಿ ನಾವು ಬದುಕಿನ ಯಶಸ್ಸಿಗಾಗಿ, ನೆಮ್ಮದಿಗಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಅಲ್ಲದೆ ಕೆಲವರು ಹರಕೆಗಳನ್ನು ಹೊತ್ತು ಹುಂಡಿಗೆ ಹಣವನ್ನು ಕೂಡ ಹಾಕುತ್ತಾರೆ. ಇತ್ತೀಚಿನ ದಿನದಲ್ಲಿ ಹೊಸ ಟ್ರೆಂಡ್ ಒಂದು ಬೆಳೆದಿದ್ದು ಕೆಲವು ಭಕ್ತರು ತಮ್ಮ ಬೇಡಿಕೆಗಳನ್ನು ಪತ್ರದಲ್ಲಿ ಬರೆದು ಹುಂಡಿಯಲ್ಲಿ ಹಾಕುತ್ತಿದ್ದಾರೆ. ಅಂತೆಯೇ ಇದೀಗ ಕಾಫಿ ನಾಡು ಚಿಕ್ಕಮಗಳೂರಿನ ಖಾಂಡ್ಯಾದ ಮಾರ್ಕಂಡೇಶ್ವರ ದೇವಸ್ಥಾನದ ಹುಂಡಿಯಲ್ಲಿ ವಿಚಿತ್ರ ಬೇಡಿಕೆಯ ಪತ್ರ ಒಂದು ಸಿಕ್ಕಿದೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ಸ್ವಾಮಿಗೆ ಓರ್ವಭಕ್ತ ವಿಚಿತ್ರವಾಗಿ ಹರಕೆ ಕಟ್ಟಿಕೊಂಡಿದ್ದಾರೆ. ಅದೇನೆಂದರೆ ಆತ “ಎರಡು ಕೋಟಿ ಹಣ ಬೇಕು” ಒಂದು ಚೀಟಿಯಲ್ಲಿ ಬರೆದು ದೇವರ ಹುಂಡಿಯಲ್ಲಿ ಹಾಕಿದ್ದಾನೆ. ಶಿವರಾತ್ರಿಯ ದಿನ ಶ್ರೀ ಮಾರ್ಕಂಡೇಶ್ವರ ಸ್ವಾಮಿ ಬಳಿ ಭಕ್ತ ಎರಡು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಹುಂಡಿ ಹಣ ಎಣಿಕೆ ವೇಳೆ ಸಿಕ್ಕ ಭಕ್ತನ ಬೇಡಿಕೆ ಚೀಟಿ ಸಿಕ್ಕಿದೆ.
