3
Holiday : ಏಷ್ಯಾದಲ್ಲೇ (Asia) ಅತ್ಯಂತ ದೊಡ್ಡ ಏರ್ ಶೋ (Air Show) ಎಂದೇ ಖ್ಯಾತಿ ಪಡೆದಿರುವ, ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಬಹು ನಿರೀಕ್ಷಿತ ಏರೋ ಶೋ- 2025 ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.
ಹೌದು, ಫೆಬ್ರವರಿ 13 ಮತ್ತು 14 ರಂದು ಏಷ್ಯಾದ ಅತಿ ದೊಡ್ಡ ಏರ್ ಶೋ ನಡೆಯಲಿದ್ದು, ಯಲಹಂಕದ ಸುತ್ತಮುತ್ತಲಿನ ಪ್ರಥಮ ದರ್ಜೆ, ಖಾಸಗಿ ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳ ತರಗತಿಗಳು ರದ್ದು ಮಾಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಸುತ್ತೋಲೆ ಹೊರಡಿಸಲಾಗಿದೆ.
