Home » Rajasthan : ಸದನದಲ್ಲಿ ಪ್ರಶ್ನೆ ಕೇಳಲು 20 ಲಕ್ಷ ಲಂಚ – ಶಾಸಕ ಅರೆಸ್ಟ್!!

Rajasthan : ಸದನದಲ್ಲಿ ಪ್ರಶ್ನೆ ಕೇಳಲು 20 ಲಕ್ಷ ಲಂಚ – ಶಾಸಕ ಅರೆಸ್ಟ್!!

0 comments

Rajasthan: ಎಂಎಲ್ಎ, ಎಂಪಿಗಳು ನಮ್ಮನ್ನು ಪ್ರತಿನಿಧಿಸುವಂತಹ ಜನನಾಯಕರು. ಅವರು ಸದನಗಳಲ್ಲಿ ನಡೆಯುವ ಕಲಾಪದಲ್ಲಿ ಪಾಲ್ಗೊಂಡು ನಮ್ಮ ಪ್ರಶ್ನೆಗಳಿಗೆ, ಕುಂದು ಕೊರತೆಗಳಿಗೆ ಧ್ವನಿಯಾಗುವವರು. ಬಳಿಕ ಅವುಗಳಿಗೆ ಪರಿಹಾರವನ್ನು ತಂದುಕೊಟ್ಟು ಜನ ಮೆಚ್ಚಿದ ನಾಯಕರು ಎನಿಸುವರು. ಆದರೆ ಇಲ್ಲೊಬ್ಬ ಶಾಸಕ ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆಯುತ್ತಿದ್ದ ಎಂಬ ವಿಚಿತ್ರ ಹಾಗೂ ಆಶ್ಚರ್ಯಕರ ಘಟನೆ ಎಂದು ಬೆಳಕಿಗೆ ಬಂದಿದೆ.

ಹೌದು, ಭಾರತ್‌ ಆದಿವಾಸಿ ಪಾರ್ಟಿಯ ಶಾಸಕ ಜೈಕ್ರಿಶ್ನ್‌ ಪಟೇಲ್‌ ಸದನದಲ್ಲಿ ಪ್ರಶ್ನೆ ಕೇಳಲು ಮೂರು ಪ್ರಶ್ನೆಗೆ 20 ಲಕ್ಷ ರೂ ಲಂಚ ಪಡೆಯುತ್ತಿದ್ದರೆಂದು ಆರೋಪಿಸಲಾಗಿದ್ದು, ಭಾನುವಾರ ಎಸಿಬಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಪ್ರಕರಣದಲ್ಲಿ ಶಾಸಕರೊಬ್ಬರನ್ನು ಬಂಧಿಸುತ್ತಿರುವುದು ಇತಿಹಾಸದಲ್ಲಿಯೇ ಮೊದಲ ಪ್ರಕರಣವಾಗಿದ ಎಂದು ರಾಜಸ್ಥಾನದ ಎಸಿಬಿ ಮುಖ್ಯ ನಿರ್ದೇಶಕ ಪ್ರಕಾಶ್‌ ಮೆಹರ್ದ ತಿಳಿಸಿದ್ದಾರೆ.

You may also like