Home » Belagavi : ವಿಷ ಆಹಾರ ಸೇವಿಸಿ 20 ಪೊಲೀಸರು ಅಸ್ವಸ್ಥ!!

Belagavi : ವಿಷ ಆಹಾರ ಸೇವಿಸಿ 20 ಪೊಲೀಸರು ಅಸ್ವಸ್ಥ!!

by V R
0 comments

Belagavi : ವಿಷಾಹಾರ ಸೇವಿಸಿದ ಪರಿಣಾಮ 20 ಪೊಲೀಸರ ಆರೋಗ್ಯದಲ್ಲಿ ಏರುಪೇರಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದಿದೆ.

 

ಅಂದಹಾಗೆ ರವಿವಾರ ರಾತ್ರಿ ಊಟದ ಬಳಿಕ 20 ಪೊಲೀಸ್ ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಊಟ ಸೇವಿಸಿದ ಬಳಿಕ ಪೊಲೀಸ್ ಸಿಬ್ಬಂದಿಗೆ ಹೊಟ್ಟೆ ನೋವು, ವಾಂತಿಬೇಧಿ ಸಮಸ್ಯೆ ಉಂಟಾಗಿದ್ದು, ತಕ್ಷಣವೇ ‌ಅವರನ್ನು ಖಾನಾಪುರ ‌ಖಾಸಗಿ ಆಸ್ಪತ್ರೆ ‌ದಾಖಲಿಸಲಾಗಿದೆ.

 

ಚಿಕಿತ್ಸೆ ಪಡೆದ ಬಳಿಕ ಸದ್ಯ ಎಲ್ಲರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದ್ದು, ಚಿಕಿತ್ಸೆ ಮತ್ತೆ ಮುಂದುವರೆದಿದೆ.

You may also like