Home » Egypt: ಸಮುದ್ರದ ಆಳದಲ್ಲಿ 2 ಸಾವಿರ ವರ್ಷದ ನಿಧಿ ಪತ್ತೆ!!

Egypt: ಸಮುದ್ರದ ಆಳದಲ್ಲಿ 2 ಸಾವಿರ ವರ್ಷದ ನಿಧಿ ಪತ್ತೆ!!

0 comments

Egypt: ಸಮುದ್ರ ಆಳದಲ್ಲಿ ಸಂಶೋಧಕರಿಗೆ ಸುಮಾರು 2000 ವರ್ಷಗಳಷ್ಟು ಹಳೆಯ ನಿಧಿಯೊಂದು ಪತ್ತೆಯಾಗಿದ್ದು ಅದನ್ನು ಈಗ ಹೊರಕ್ಕೆ ತೆಗೆಯಲಾಗಿದೆ. ಈ ಸುದ್ದಿ ಇದೆಯಾ ತುಂಬಾ ವೈರಲ್ ಆಗುತ್ತಿದೆ.

ಹೌದು, ಈಜಿಪ್ಟ್ ನ ಅಲೆಕ್ಸಾಂಡ್ರಿಯಾ ಬಳಿಯ ಅಬು ಕಿರ್ ಕೊಲ್ಲಿಯ ಕರಾವಳಿಯಲ್ಲಿ ಸುಮಾರು 2000 ವರ್ಷ ಹಳೆಯ ಕಲಾಕೃತಿಯೊಂದನ್ನು ಪತ್ತೆಹಚ್ಚಿದ್ದು, ಅದನ್ನು ಹೊರಕ್ಕೆ ತೆಗೆಯಲಾಗಿದೆ. ಈ ಕಲಾಕೃತಿ ಸುಮಾರು ಎರಡು ಸಾವಿರ ವರ್ಷಗಳಿಂತಲೂ ಹಳೆಯದು ಎಂದು ವರದಿಯಾಗಿದ್ದು, ಈ ಕಲಾಕೃತಿಯ ತಲೆಯ ಭಾಗ ತುಂಡಾಗಿದೆ.

ಆಶ್ಚರ್ಯದ ಸಂಗತಿ ಏನೆಂದರೆ ಈ ಪ್ರತಿಮೆ ಟಾಲೆಮಿಕ್, ಅಥವಾ ರೋಮ್ ಅವಧಿಗೂ ಹಳೆಯದ್ದಾಗಿದ್ದು, ಮೇಲ್ನೋಟಕ್ಕೆ ಇದೊಂದು ಪಾದ್ರಿಯ ಆಕೃತಿ ಎಂದು ಹೇಳಲಾಗಿದೆ. ಸಾವಿರಾರು ವರ್ಷಗಳಿಂದ ಸಮುದ್ರದ ನೀರಿನ ಒಳಗೆಯೇ ಇದ್ದಿದ್ದರಿಂದ ಆಕೃತಿಯ ಆಕಾರ ವಿರೂಪಗೊಂಡಿದೆ. ವಿಶೇಷ ಅಂದರೆ ಸಮುದ್ರದ ಕೆಳಕ್ಕೆ ಕಲ್ಲಿನ ಕಟ್ಟಡ, ಪ್ರಾಚೀನ ನೀರು ಸಂಗ್ರಹಣೆ ಕೊಳ, ಮೀನು ಕೃಷಿಗಾಗಿ ಬಳಸಲಾಗುತ್ತಿದ್ದ ಜಲಾಶಯ, ಕಲ್ಲು ಕೆತ್ತನೆಯ ಕೊಳ, ಸೇರಿದಂತೆ ಇನ್ನಿತರ ಪ್ರಾಚೀನ ವಸ್ತುಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.

Drugs supply: ಅಕ್ರಮ ಗಾಂಜಾ ಮಾರಾಟ-ಸರಬರಾಜು : ಅಸ್ಸಾಂ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್

You may also like