Home » B S Yadiyurappa: 2028ರ ವಿಧಾನಸಭಾ ಚುನಾವಣೆ – ಈಗಲೇ ಈ ಒಂದು ಕ್ಷೇತ್ರಕ್ಕೆ BJP ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ

B S Yadiyurappa: 2028ರ ವಿಧಾನಸಭಾ ಚುನಾವಣೆ – ಈಗಲೇ ಈ ಒಂದು ಕ್ಷೇತ್ರಕ್ಕೆ BJP ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ

0 comments

B S Yadiyurappa : 2028ರ ವಿಧಾನಸಭಾ ಚುನಾವಣೆಗೆ ಇನ್ನು ಎರಡೂವರೆ ವರ್ಷಗಳ ಕಾಲ ಸಮಯವಕಾಶವಿದೆ. ಆದರೆ ಇದಕ್ಕೂ ಮುಂಚಿತವಾಗಿಯೇ ಬಿಜೆಪಿ ವರಿಷ್ಠ ಬಿಎಸ್ ಯಡಿಯೂರಪ್ಪನವರು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದು, ಪಕ್ಷದ ಕಚೇರಿಗೆ ಭೇಟಿ ನೀಡುತ್ತಿರುವ ಯಡಿಯೂರಪ್ಪ, ಪಕ್ಷದ ಮುಖಂಡರ ನಿವಾಸಕ್ಕೂ ತೆರಳಿದ್ದಾರೆ. ಈ ಬೆನ್ನಲ್ಲೇ ಅವರು ಮುಂಬರುವ ಅಂದರೆ ಮೇ 2028ರಲ್ಲಿ ನಡೆಯಬೇಕಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಲೇ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವ ಮೂಲಕ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ

ಯಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಶವಂತಪುರ ಅಸೆಂಬ್ಲಿ ಕ್ಷೇತ್ರಕ್ಕೆ ಯಡಿಯೂರಪ್ಪ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ್ದಾರೆ. ಬಿಜೆಪಿ ನಾಯಕ ಕೆಆರ್ ಇಡಿಎಲ್ (Karnataka Renewable Energy Development Limited ) ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಯಶವಂತಪುರ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಬಿಎಸ್ವೈ ಘೋಷಣೆಯನ್ನು ಮಾಡಿದ್ದಾರೆ.

ಅಂದಹಾಗೆ ರುದ್ರೇಶ್ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲಿರುವ ಅವರ ನಿವಾಸಕ್ಕೆ ಶುಭ ಕೋರಲು ಯಡಿಯೂರಪ್ಪ ಹೋಗಿದ್ದರು. ಆ ವೇಳೆ, “ಮುಂದಿನ ವಿಧಾನಸಭಾ ಚುನಾವಣೆಗೆ ಯಶವಂತಪುರ ಕ್ಷೇತ್ರದಿಂದ ಎಂ.ರುದ್ರೇಶ್ ಸ್ಪರ್ಧಿಸಲಿದ್ದಾರೆ. ನಿಸ್ವಾರ್ಥ ಸೇವೆಯಿಂದ ಸಮಾಜಮುಖಿ ಕೆಲಸ ಮಾಡುವವರಿಗೆ ಯಾವಾಗಲೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ” ಎಂದು ಯಡಿಯೂರಪ್ಪ ಹೇಳಿದ್ದಾರೆ.

ಅಂದಹಾಗೆ ಈಗಾಗಲೇ ಯಶವಂತಪುರ ಕ್ಷೇತ್ರದ ಬಿಜೆಪಿಯ ಹಿಡಿತದಲ್ಲಿದೆ. ಅಂದರೆ ಎಸ್ ಟಿ ಸೋಮಶೇಖರ್ ಅವರು ಇಲ್ಲಿನ ಸದ್ಯದ ಶಾಸಕ. ಆದರೆ ಅವರು ಇದೀಗ ಕಾಂಗ್ರೆಸ್ ಪರ ಒಲವು ತೋರುತ್ತಿರುವ ಕಾರಣ ಹಾಗೂ ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಅವರಿಗೆ ಬಿಜೆಪಿ ಟಿಕೆಟ್ ಕೊಡುವುದು ಅನುಮಾನ ಎನ್ನಲಾಗಿತ್ತು. ಆದರೆ ಇದೀಗ ಯಡಿಯೂರಪ್ಪನವರು ರುದ್ರೇಶ್ ಅವರಿಗೆ ಟಿಕೆಟ್ ಘೋಷಣೆ ಮೂಲಕ ಅದನ್ನು ನಿಜವಾಗಿಸಿಬಿಟ್ಟಿದ್ದಾರೆ.

ಇದನ್ನೂ ಓದಿ: Satish Jarakiholi : ಸಿಎಂ ಆಗಲು ಶನಿಕಾಟ ಇರಬಾರದು ಎಂದ ಸತೀಶ್ ಜಾರಕಿಹೊಳಿ – ಇಲ್ಲಿ ಶನಿ ಯಾರು, ಕಾಟ ಯಾರ್ದು?

You may also like