Home » Iftar party: ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸರ್ವ ಧರ್ಮ ಸೌಹಾರ್ದ ಇಪ್ತಾರ್ ಕೂಟ

Iftar party: ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸರ್ವ ಧರ್ಮ ಸೌಹಾರ್ದ ಇಪ್ತಾರ್ ಕೂಟ

0 comments

Iftar party: ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನ(ರಿ) ಅರಂತೋಡು(Aranthodu) ಇದರ ವತಿಯಿಂದ 20 ನೇ ವರ್ಷದ ಸರ್ವ ಧರ್ಮ ಸೌಹಾರ್ದ ಇಫ್ತಾರ್ ಕೂಟವು ಮಾ.26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ. ದುವಾಶೀರ್ವಾಚನವನ್ನು ಅರಂತೋಡು ಬದ್ರಿಯ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಮಾಡಲಿದ್ದಾರೆ.

ವಿಶೇಷ ಅತಿಥಿಗಳಾಗಿ ಸುಳ್ಯ ಬೀರಮಂಗಲ ಸೈಂಟ್ ಬ್ರಿಜೇಶ್ ಚರ್ಚ್ ನ ಧರ್ಮ ಗುರುಗಳಾದ ಫಾದರ್ ವಿಕ್ಟರ್ ಡಿ’ಸೋಜ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ದಪುರುಷಮಠ ಮರ್ಕಂಜದ ಧರ್ಮದರ್ಶಿಗಳು ಹಾಗೂ ಕರ್ನಾಟಕ ರಾಜ್ಯದ ಅಖಿಲ ಭಾರತೀಯ ಸಂತೆ ಸಮಿತಿ(ರಿ) ಇದರ ಮುಖ್ಯ ಕಾರ್ಯದರ್ಶಿಗಳಾದ ರಾಜೇಶ್ ನಾಥ್ ಜಿ ಭಾಗವಹಿಸಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು ಹಾಗೂ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಭಾಗವಹಿಸಲಿದ್ದಾರೆ.

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನವು ಕಳೆದ 3 ದಶಕಗಳಿಂದ ಶೈಕ್ಷಣಿಕ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿ ಮತ್ತು ಕ್ರೀಡಾ ಚಟುವಟುಕೆಗಳನ್ನು ನಡೆಸುತ್ತಾ ಬಂಧಿರುತ್ತದೆ. ಸಂಸ್ಥೆಯು ನೆರೆ, ಭೂಕಂಪ, ಪ್ರಳಯ ಮತ್ತು ಕೊರೋನಾ ಸಂಧರ್ಭದಲ್ಲಿ ಸಂತ್ರಸ್ಥರಿಗೆ ಆಹಾರ ಸಾಮಾಗ್ರಿಗಳು, ಬಟ್ಟೆಬರೆ, ಔಷಧಿ ವಿತರಣೆ, ಮನೆ ನಿರ್ಮಾಣಕ್ಕೆ ಸಹಾಯಧನ , ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯಧನ, ವಿದ್ಯಾರ್ಥಿ ವೇತನ ವಿತರಣೆ ಮುಂತಾದ ಸಮಾಜ ಮುಖಿ ಕೆಲಸವನ್ನು ಮಾಡುತ್ತಿದೆ. ಸಂಸ್ಥೆಯ ವತಿಯಿಂದ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಈ ವರ್ಷ 20 ನೇ ವರ್ಷದ ಸೌಹಾರ್ದ ಇಪ್ತಾರ್ ಕೂಟವನ್ನು ವಿಶಿಷ್ಠ ಅತಿಥಿಗಳೊಂದಿಗೆ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿರುತ್ತಾರೆ.

You may also like