Home » Nude Marriage : ಬೆತ್ತಲಾಗಿ ಮದುವೆಯಾದ 29 ಜೋಡಿಗಳು !! ಇಲ್ಲಿ ನೆಂಟರಿಷ್ಟರೂ ನಗ್ನವಾಗಬೇಕು !!

Nude Marriage : ಬೆತ್ತಲಾಗಿ ಮದುವೆಯಾದ 29 ಜೋಡಿಗಳು !! ಇಲ್ಲಿ ನೆಂಟರಿಷ್ಟರೂ ನಗ್ನವಾಗಬೇಕು !!

0 comments

Nude Marriage : ಮದುವೆ ಎಂದರೆ ಅಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಬಟ್ಟೆಗಳು, ಹೊಸ ಆಭರಣಗಳು ಎಲ್ಲವೂ ಅಲ್ಲಿ ಕಳೆಗಟ್ಟಿರುತ್ತದೆ. ಮದುವೆ ಎಂದ ಮೇಲೆ ವಿವಿಧ ನಮೂನೆಯ, ಚಂದ ಚಂದದ ಉಡುಪುಗಳೇ ಅಲ್ಲಿ ಭೂಷಣವಾಗಿರುತ್ತದೆ. ಎಲ್ಲರೂ ಅಂದ ಚೆಂದದ ಬಟ್ಟೆ ತೊಟ್ಟು ಸರ್ವಾಲಂಕಾರಭೂಷಿತರಾಗಿರುತ್ತಾರೆ. ಆದರೆ ಇಲ್ಲೊಂದಡೆ ಬಟ್ಟೆಯನ್ನೇ ಹಾಕದೆ ಮದುವೆ ನಡೆಯುತ್ತದೆ(Nude Marriage). ಕೇವಲ ವಧು, ವರ ಮಾತ್ರವಲ್ಲ ಬಂದಿರುವ ನೆಂಟರಿಷ್ಟರು ಕೂಡ ಬೆತ್ತಲೆಯಾಗಿರುತ್ತಾರೆ. ಅಂತೆಯೇ ಈ ಸಲ ಇಲ್ಲಿ 29 ಜೋಡಿಗಳು ಹಸೆಮಣೆ ಏರಿವೆ.

ಜಮೈಕಾದ ರೆಸಾರ್ಟ್‌ವೊಂದರಲ್ಲಿ ಬರೋಬ್ಬರಿ 29 ಜೋಡಿಗಳು ಮೈಮೇಲೆ ತುಂಡುಡುಗೆಯೂ ಇಲ್ಲದೆ ಮದುವೆ ಮಾಡಿಕೊಂಡಿವೆ. ಮದುವೆಯಾದ ಜೋಡಿಗಳಷ್ಟೇ ಅಲ್ಲದೇ ಮದುವೆಯಲ್ಲಿ ಭಾಗಿಯಾದ ಅತಿಥಿಗಳೂ ನಗ್ನವಾಗಿಯೇ ಭಾಗಿಯಾಗಿದ್ದರು. ಹೆಡೋನಿಸಂ ರೆಸಾರ್ಟ್‌ ಪ್ರತಿ ವರ್ಷ 3 ದಿನಗಳ ನಗ್ನ ದಿನವನ್ನು ಆಚರಿಸಲಿದ್ದು, ಈ ಸಮಯದಲ್ಲಿ ಎಲ್ಲರೂ ನಗ್ನವಾಗಿಯೇ ಇಲ್ಲಿ ಭಾಗಿಯಾಗುತ್ತಾರೆ. 2003ರಿಂದ ಇದನ್ನು ನಡೆಸಲಾಗುತ್ತಿದ್ದು, ಪ್ರಕೃತಿಯ ಜತೆ ಮನುಷ್ಯನ ಸಹಜ ಬದುಕನ್ನು ಗೊತ್ತು ಮಾಡಿಸುವುದಕ್ಕೋಸ್ಕರ ಇದನ್ನು ಮಾಡಲಾಗುತ್ತಿದೆ ಎಂದು ರೆಸಾರ್ಟ್‌ ಹೇಳಿದೆ.

ಅಂದಹಾಗೆ 29 ದಂಪತಿಗಳಲ್ಲಿ ರಷ್ಯನ್, ಕ್ರೌ ಬುಡಕಟ್ಟಿನ ಸದಸ್ಯರು, ಸ್ಥಳೀಯ ಅಮೆರಿಕನ್ ಮತ್ತು ಕೆನಡಾದ ಪ್ರಜೆ ಇದ್ದರು. ಫ್ಲೋರಿಡಾದ ಯೂನಿವರ್ಸಲ್ ಲೈಫ್ ಚರ್ಚ್‌ನ ರೆವರೆಂಡ್ ಫ್ರಾಂಕ್ ಸರ್ವಸಿಯೊ ಸಾಮೂಹಿಕ ವಿವಾಹ ಸಮಾರಂಭ ನೆರವೇರಿಸಿದರು.
ಈ ರೆಸಾರ್ಟ್ ಹಿಂದೆ ಇದೇ ರೀತಿಯ ವಿವಾಹಗಳನ್ನು ಆಯೋಜಿಸಲು ಪ್ರಸಿದ್ಧವಾಗಿದೆ ಎಂದು ತಿಳಿದು ಬಂದಿದೆ.

You may also like

Leave a Comment