2nd PUC Revaluation: ದ್ವಿತೀಯ ಪಿಯುಸಿ ಪರೀಕ್ಷೆ -1 ರ ವಿಷಯಗಳ ಮಾರ್ಕು ಸಮಾಧಾನ ತರದೆ ಇದ್ದಲ್ಲಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನಕ್ಕೆ ಮೊದಲು ಆಯಾ ವಿಷಯಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಇದೀಗ ತಮ್ಮ ಉತ್ತರ ಪತ್ರಿಕೆ ನೋಡಲು ಬಯಸುವ ವಿದ್ಯಾರ್ಥಿಗಳು ಅರ್ಜಿ ಹಾಕಿ ಸ್ಕ್ಯಾಂಡ್ ಪ್ರತಿ ಪಡೆದುಕೊಂಡಿದ್ದು, ಇನ್ನು ಕೆಲವರಿಗೆ ಇನ್ನೆರಡು ದಿನಗಳಲ್ಲಿ ಸ್ಕ್ಯಾನ್ಡ್ ಉತ್ತರ ಪ್ರತಿಗಳು ದೊರೆಯುತ್ತದೆ. ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಲು ಪ್ರಕ್ರಿಯೆ, ಇಂದಿನಿಂದ ಅಂದರೆ ಮೇ 18 ರಿಂದಲೇ ಶುರುವಾಗಿದೆ. ಅಷ್ಟರಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಟೆಕ್ನಿಕಲ್ ಸಮಸ್ಯೆ ತಲೆದೋರಿದೆ.
ಇಂದು ಬೆಳಗ್ಗಿನಿಂದ ಹಲವು ವಿದ್ಯಾರ್ಥಿಗಳು ಮತ್ತು ಪೋಷಕರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಪರದಾಡಿದ್ದಾರೆ. 530 ರೂಪಾಯಿ ಕೊಟ್ಟು ತಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಕಾಪಿ ಪಡೆದುಕೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು ಮರು ಮೌಲ್ಯಮಾಪನ ಮಾಡಲು ಆನ್ ಲೈನ್ ಫಾರ್ಮ್ ಭರ್ತಿ ಮಾಡಿದ ನಂತರ ಸಬ್ಮಿಟ್ ಬಟನ್ ಒತ್ತಿದ ಕೂಡಲೇ ಹಾಕಿದ ಅರ್ಜಿ ಎಲ್ಲಾ ಡಿಲೀಟ್ ಆಗಿ ಮತ್ತೆ ಹೊಸ ಪೇಜ್ ಗೆ ವೆಬ್ಸೈಟ್ ಹೋಗುತ್ತದೆ. ಎಲ್ಲಾ ಅಂಕಿ ಅಂಶ ತುಂಬಿದ ನಂತರ ಮತ್ತೆ ಹೊಸದಾಗಿ ಮೊದಲಿನ ಜಾಗಕ್ಕೆ ವೆಬ್ಸೈಟ್ ಕರೆದೊಯ್ಯುತ್ತದೆ. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸಿಇಟಿ ನಡೆಯುತ್ತಿರುವ ಒತ್ತಡದ ಸಂದರ್ಭದಲ್ಲಿ ಸಮಯ ಹಾಳು ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಾಗಿದೆ.
ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಗಳಿಗೆ ಅರ್ಜಿ ಸಲ್ಲಿಸಿದ ವಿಷಯಗಳಿಗೆ ಮಾತ್ರ ಮರುಮೌಲ್ಯಮಾಪನ/ಮರುಎಣಿಕೆಗೆಗಾಗಿ ಅರ್ಜಿ ಸಲ್ಲಿಸಲು ಇನ್ನೂ ಎರಡು ಅವಕಾಶವಿದೆ. ಇಂದಿನಿಂದ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸುವ ವಿಷಯಗಳಿಗೆ ಮರುಎಣಿಕೆಗಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಪ್ರತಿ ವಿಷಯಕ್ಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ರೂ.530 ಶುಲ್ಕ ಪಡೆಯಲಾಗಿತ್ತು. ಇನ್ನು ಪ್ರತಿ ವಿಷಯಕ್ಕೆ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ರೂ.1670 ತೆರಬೇಕಾಗುತ್ತದೆ. ಆದರೆ ಅಂಕಗಳ ಮರುಎಣಿಕೆಗಾಗಿ ಯಾವುದೇ ಶುಲ್ಕವಿಲ್ಲ.
ಯಾವುದಕ್ಕೆ ಎಷ್ಟು ಶುಲ್ಕ?
ಅರ್ಜಿ ಸಲ್ಲಿಸುವ ಮುಖ್ಯ ದಿನಾಂಕಗಳು
ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸುವ ದಿನಾಂಕ : ಏಪ್ರಿಲ್ 10 ರಿಂದ 16, 2024 ರವರೆಗೆ.
ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾರಂಭ ಹಾಗೂ ಕೊನೆಯ ದಿನಾಂಕ: ಏಪ್ರಿಲ್ 14 – 19, 2024 ರವರೆಗೆ. ಮರುಮೌಲ್ಯಮಾಪನ ಮತ್ತು ಮರುಮೊತ್ತಕ್ಕಾಗಿ ಆನ್‌ಲೈನ್ ಅಪ್ಲಿಕೇಶನ್ ಹಾಕಲು ಏಪ್ರಿಲ್ 20, 2024 ರಂದು ಕೊನೆಯ ದಿನವಾಗಿರುತ್ತದೆ. ಮರುಮೌಲ್ಯಮಾಪನ ಮಾಡಲು ಬೇಕಾದ ಶುಲ್ಕ ಪಾವತಿಯ ದಿನಾಂಕವು ಏಪ್ರಿಲ್ 20, 2024 ರಂದು ಕೊನೆಗೊಳ್ಳುತ್ತದೆ. ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ಯಾನ್ಡ್ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ ಇರುತ್ತದೆ) : ಏಪ್ರಿಲ್ 15-20, 2024 ರವರೆಗೆ.
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು https://kseab.karnataka.gov.in/english ಕ್ಕೆ ಭೇಟಿ ನೀಡಬೇಕು.
ಇದನ್ನೂ ಓದಿ: Hubballi: ಪ್ರೀತಿ ನಿರಾಕರಣೆ, ಹುಬ್ಬಳ್ಳಿಯ ಕಾರ್ಪೋರೇಟರ್ ಮಗಳ ಬರ್ಬರ ಹತ್ಯೆ ಮಾಡಿದ ಆರೋಪಿ ಫಯಾಜ್
