4
Ladakh: ಲಡಾಖ್ ನಲ್ಲಿ ಭೂಕಂಪನ ಉಂಟಾಗಿದ್ದು, ಲಡಾಖ್ ನ ಲೇಹ್ ನಲ್ಲಿ ರಿಕ್ಟರ್ ಮಾಪಕದಲ್ಲಿ ತೋರಿಸಿರುವಂತೆ 3.5 ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರವು ತಿಳಿಸಿದೆ.
NCS ಪ್ರಕಾರ ರಾತ್ರಿ ಸುಮಾರು 11:46ಕ್ಕೆ 10 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದ್ದು, ಅಕ್ಷಾಂಶ 34.54N ಹಾಗೂ ರೇಖಾ0ಶ 78.38E ಎಂಬುದರಲ್ಲಿ ಕಂಪನ ಉಂಟಾಗಿದೆ ಎಂದು ತಿಳಿಸಲಾಗಿದೆ.
ಸದ್ಯಕ್ಕೆ ಯಾವುದೇ ರೀತಿಯ ಸಾವು ನೋವುಗಳು ಸಂಭವಿಸಿಲ್ಲ ಎಂದು NCS ಹೇಳಿದ್ದು, ಇನ್ನಷ್ಟು ವಿಷಯಗಳಿಗಾಗಿ ಕಾದು ನೋಡಬೇಕಿದೆ.
