Home » Belthangady: ಉಜಿರೆಯಲ್ಲಿ ಬಳಿ 33/11 ಕೆ ವಿ ಸಾಮರ್ಥ್ಯದ ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪನೆ -ಇಂಧನ ಸಚಿವ ಕೆ.ಜೆ.ಜಾರ್ಜ್

Belthangady: ಉಜಿರೆಯಲ್ಲಿ ಬಳಿ 33/11 ಕೆ ವಿ ಸಾಮರ್ಥ್ಯದ ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪನೆ -ಇಂಧನ ಸಚಿವ ಕೆ.ಜೆ.ಜಾರ್ಜ್

by ಕಾವ್ಯ ವಾಣಿ
0 comments

Belthangady: ಬೆಳ್ತಂಗಡಿ (Belthangady) ತಾಲ್ಲೂಕಿನ ಉಜಿರೆ ಗ್ರಾಮದ ನಿನ್ನಿಕಲ್ಲು ಬಳಿ 33/11ಕೆವಿ ಸಾಮರ್ಥ್ಯದ ವಿದ್ಯುತ್‌ ವಿತರಣಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಕೆ ಜೆ.ಜಾರ್ಜ್ ಹೇಳಿದರು.

ಇಂಧನ ಸಚಿವ ಕೆ ಜೆ.ಜಾರ್ಜ್ ಅವರು ಕರ್ನಾಟಕ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್‌ ಕೇಳಿದ ಪ್ರಶ್ನೆಗೆ ಉತ್ತರಿಸಿ ಉಜಿರೆ ಗ್ರಾಮದ ಸರ್ವೆ ನಂ:393/3 ರಲ್ಲಿ 0.96 ಎಕರೆ ಸರಕಾರಿ ಜಮೀನಿಗೆ ಮಂಜೂರಾತಿ ದೊರೆತಿದ್ದು ಜಮೀನು ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ. ಟೆಂಡ‌ರ್ ನಿಬಂಧನೆಯಂತೆ ಸದರಿ ಕಾಮಗಾರಿಯನ್ನು ಕೆಲಸದ ವಿವರ ನೀಡಿದ ದಿನದಿಂದ 12 ತಿಂಗಳೊಳಗೆ ಪೂರ್ಣಗೊಳಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗುವುದು ಎಂದರು.

You may also like