Ration Card : ಆಹಾರ ಇಲಾಖೆಯು ರಾಜ್ಯಾದ್ಯಂತ ಬರೋಬ್ಬರಿ 7,76,206 ಅನರ್ಹ ರೇಷನ್ ಕಾರ್ಡ್‌ಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 4.50 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿದೆ.
ಹೌದು, ಗ್ಯಾರಂಟಿ ಯೋಜನೆಗಳ ಆರ್ಥಿಕ ಕಡಿಮೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ನಿಗದಿತ ಮಾನದಂಡ ಉಲ್ಲಂಘಿಸಿ ಪಡೆದುಕೊಂಡಿದ್ದ ಸುಮಾರು 4.50 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿದೆ. ಈ ಕುರಿತಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಮಾಹಿತಿಯನ್ನು ಹಂಚಿಕೊಂಡಿದೆ.
ಅಂದಹಾಗೆ ರಾಜ್ಯಾದ್ಯಂತ ಆಹಾರ ಇಲಾಖೆ 4.50 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದೆ. ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿಯಿಂದ 14.50 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇವರು ಅಧಿಕ ಆದಾಯ ಹೊಂದಿದವರು ಮತ್ತು ಕುಟುಂಬ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಹೀಗಾಗಿ ಈ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆ ಪ್ರಯೋಜನ ನಿಂತಿದೆ. ಇದೊಂದೇ ಯೋಜನೆಯಿಂದ ತಿಂಗಳಿಗೆ ಸುಮಾರು 90 ಕೋಟಿ ಉಳಿತಾಯವಾಗುತ್ತದೆ.
ಅನರ್ಹರಾಗಿದ್ದುಕೊಂಡು ಫಲಾನುಭವಿಗಳಾಗಿದ್ದ ಇವರಿಗೆ ತಿಂಗಳಿಗೆ 72.50 ಲಕ್ಷ ಕ್ವಿಂಟಲ್ ಪಡಿತರ ವಿತರಿಸಲಾಗುತ್ತಿತ್ತು. ಇದಕ್ಕೆ ವೆಚ್ಚವಾಗುತ್ತಿದ್ದ ಅಂದಾಜು 22 ಕೋಟಿ ರೂಪಾಯಿ ಉಳಿತಾಯವಾಗಿದೆ. ಇದಕ್ಕೆ ವೆಚ್ಚವಾಗುತ್ತಿದ್ದ ಅಂದಾಜು 22 ಕೋಟಿ ರೂಪಾಯಿ ಉಳಿತಾಯವಾಗಿದೆ.
