Home » Holiday : ಈ ಭಾಗದ ಶಾಲೆಗಳಿಗೆ 4 ದಿನ ರಜೆ ಘೋಷಣೆ

Holiday : ಈ ಭಾಗದ ಶಾಲೆಗಳಿಗೆ 4 ದಿನ ರಜೆ ಘೋಷಣೆ

0 comments

Holiday: ದೇಶದ ವಿವಿಧ ಭಾಗದಲ್ಲಿ ಬಿಸಿಲ ಝಳ (ತಾಪಮಾನ) ಹೆಚ್ಚಳವಾಗುತ್ತಿರುವ ನಡುವೆ ರಾಜ್ಯದಲ್ಲಿ ಸುಮಾರು 9 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹೀಗಾಗಿ ಕೆಲವು ರಾಜ್ಯದ ಶಾಲೆಗಳಿಗೆ ರಜೆ ನೀಡಲಾಗುತ್ತಿದೆ. ಇದರ ಜೊತೆಗೆ ಹರಿಯಾಣದಲ್ಲಿ ಸಾಲು ಸಾಲು ಹಬ್ಬಗಳು ಬಂದ ಕಾರಣ ಶಾಲೆಗಳಿಗೆ ನಾಲ್ಕು ದಿನ ರಜೆಯನ್ನು ಘೋಷಿಸಲಾಗಿದೆ.

 

ಹೌದು, ಹರಿಯಾಣ ಸರ್ಕಾರವು ರಾಜ್ಯದ ಶಾಲೆಗಳಲ್ಲಿ 4 ದಿನಗಳ ರಜೆಯನ್ನು ಘೋಷಣೆ ಮಾಡಿದೆ.ಈ ರಜೆಗಳು ವಿದ್ಯಾರ್ಥಿ ಮತ್ತು ಶಿಕ್ಷಕರಿಗೂ ಅನ್ವಯ ಆಗಲಿದೆ ಎಂದು ತಿಳಿದುಬಂದಿದೆ. ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ ಏಪ್ರಿಲ್ 18ರಂದು ಗುಡ್‌ ಫ್ರೈಡೇ, ಮೇ 12ರಂದು ಬುದ್ಧ ಪೂರ್ಣಿಮಾ, ಅಕ್ಟೋಬರ್ 10ರಂದು ಕರ್ವಾ ಚೌತ್ ಮತ್ತು ನವೆಂಬರ್ 25ರಂದು ಗುರು ತೇಜ್ ಬಹದ್ದೂರ್ ಹುತಾತ್ಮ ದಿನದಂದು ರಾಜ್ಯದ ಶಾಲೆಗಳಿಗೆ ರಜೆ ಇರಲಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

You may also like