Home » Chinnaswamy Stampede: RCB ಮ್ಯಾನೇಜರ್, DNA ಸಂಸ್ಥೆಯವರು ಸೇರಿ ಒಟ್ಟು 4 ಮಂದಿಗೆ 14 ದಿನಗಳ ನ್ಯಾಯಾಂಗ ಬಂಧನ:ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

Chinnaswamy Stampede: RCB ಮ್ಯಾನೇಜರ್, DNA ಸಂಸ್ಥೆಯವರು ಸೇರಿ ಒಟ್ಟು 4 ಮಂದಿಗೆ 14 ದಿನಗಳ ನ್ಯಾಯಾಂಗ ಬಂಧನ:ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

0 comments

Chinnaswamy Stampede: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ RCB ಮ್ಯಾನೇಜರ್, DNA ಸಂಸ್ಥೆಯವರನ್ನು ಬಂಧಿಸಲಾಗಿದ್ದು ಒಟ್ಟು ನಾಲ್ವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಈ ಪ್ರಕರಣದಲ್ಲಿ KSCA ರಿಟ್ ಅರ್ಜಿ ಸಲ್ಲಿಸಿದ್ದು, 2,3 ಹಾಗೂ 4 ನೇ ಆರೋಪಿಗಳ ಮೇಲೆ ಬಲವಂತದ ಕ್ರಮ ಬೇಡವೆಂದು ಹೈ ಕೋರ್ಟ್ ಅವರಿಗೆ ಷರತ್ತಿನ ಆಧಾರದ ಮೇಲೆ ರಿಲೀಫ್ ನೀಡಿದೆ.

RCB ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೇ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೂಡ ನಡೆದಿದ್ದು, ಮಾಧ್ಯಮದ ಮುಂದೆ ಸ್ವತಃ ಸಿಎಂ ಅರೆಸ್ಟ್ ಮಾಡಿ ಎಂದ ಕಾರಣದಿಂದಾಗಿ ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟು ಮೂರು FIR ಗಳ ದಾಖಲಾಗಿದ್ದು, ಸುಮೋಟೋ ಕೇಸ್ ದಾಖಲಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ

You may also like