Mumbai: ಮುಂಬೈ ಶಾಲೆ ಒಂದರಲ್ಲಿ ಅಘಾತಕಾರಿ ಪ್ರಕರಣ ಒಂದು ಬೆಳಕಿಗೆ ಬಂದಿದ್ದು 40 ವರ್ಷದ ಮಹಿಳಾ ಶಿಕ್ಷಕಿಯೊಬ್ಬರು 16 ವರ್ಷದ ವಿದ್ಯಾರ್ಥಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.
ಹೌದು, ವಿವಾಹಿತ ಇಂಗ್ಲಿಷ್ ಭಾಷಾ ಶಿಕ್ಷಕಿ ಅಪ್ರಾಪ್ತ ವಯಸ್ಕನನ್ನು ಐಷಾರಾಮಿ ಹೋಟೆಲ್ಗಳಿಗೆ ಕರೆದೊಯ್ದು ಅಲ್ಲಿ ಆತನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬಂಧನಕ್ಕೊಳಗಾದ ಈ ಮಹಿಳೆ ಅಪ್ರಾಪ್ತ ವಯಸ್ಕನ ಮೇಲೆ ಎಷ್ಟು ಗೀಳನ್ನು ಹೊಂದಿದ್ದಳೆಂದರೆ, ಈ ವರ್ಷ ಅವನು ಶಾಲೆಯಿಂದ ಹೊರಗುಳಿದ ನಂತರವೂ ಅವನನ್ನು ಸಂಪರ್ಕಿಸಲು ಪ್ರಯತ್ನಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ, ಇಂಗ್ಲಿಷ್ ಶಿಕ್ಷಕಿ, 11 ನೇ ತರಗತಿಯಲ್ಲಿದ್ದಾಗ ಆಕೆ ಬಾಲಕನಿಗೆ ಪಾಠ ಮಾಡಿದ್ದಳು. ಡಿಸೆಂಬರ್ 2023 ರಲ್ಲಿ ಪ್ರೌಢಶಾಲೆಯ ವಾರ್ಷಿಕ ಸಮಾರಂಭಕ್ಕೆ ನೃತ್ಯ ಮಾಡುವುದಕ್ಕಾಗಿ ಡಾನ್ಸ್ ಗ್ರೂಪ್‌ಗಳನ್ನು ಮಾಡಲು ಹಲವು ಬಾರಿ ಸಭೆಗಳನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿಯೇ ಆಕೆಗೆ ಬಾಲಕನತ್ತ ಆಕರ್ಷಿತಳಾಗಿದ್ದಾಳೆ. 2023 ರ ಡಿಸೆಂಬರ್‌ನಲ್ಲಿ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಅಲ್ಲದೆ 2024ರ ಜನವರಿಯಿಂದ ತಾನು ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾಗಿ ಆಕೆ ಬಹಿರಂಗಪಡಿಸಿದ್ದಾಳೆ.
ಬರೀ ನಿರ್ಜನ ಪ್ರದೇಶ ಮಾತ್ರವಲ್ಲದೇ ಈ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನು ದಕ್ಷಿಣ ಮುಂಬೈ ನಗರದ ಹಲವು ಫೈವ್ ಸ್ಟಾರ್ ಹೊಟೇಲ್‌ಗಳಿಗೂ ಕರೆದುಕೊಂಡು ಹೋಗಿ ಹಲವು ಭಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ. ಅಲ್ಲದೇ ಕೆಲವು ಸಮಯದಲ್ಲಿ ಈಕೆ ಆತನಿಗೆ ಹೀಗೆ ಲೈಂಗಿಕ ದೌರ್ಜನ್ಯವೆಸಗುವ ಮೊದಲು ಮದ್ಯವನ್ನು ಕೂಡ ಕುಡಿಸಿದ್ದಾಳೆ. ಘಟನೆ ಬೆಳಕಿಗೆ ಬಂದ ನಂತರ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಆಕೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಆಕೆಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, ಬಾಲಾಪರಾಧಿ ನ್ಯಾಯ (ಮಕ್ಕಳ ರಕ್ಷಣೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಅಪರಾಧಗಳ ಆರೋಪ ಹೊರಿಸಲಾಗಿದೆ.
