Home » NEET: ನೀಟ್‌ ಹೆಚ್ಚುವರಿ 400 ವೈದ್ಯಕೀಯ ಸೀಟು ಲಭ್ಯ

NEET: ನೀಟ್‌ ಹೆಚ್ಚುವರಿ 400 ವೈದ್ಯಕೀಯ ಸೀಟು ಲಭ್ಯ

0 comments
NEET Exam

NEET: ಕರ್ನಾಟಕಕ್ಕೆ ಹೆಚ್ಚುವರಿ 400 ವೈದ್ಯಕೀಯ ಸೀಟುಗಳು ಲಭ್ಯವಿದೆ. ಎರಡನೇ ಸುತ್ತಿನ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಗಣನೆ ಮಾಡಿದೆ.

ಎನ್‌ಎಂಸಿ ಬೆಳಗಾವಿ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಮೈಸೂರು, ರಾಯಚೂರು, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಟಲ್‌ ಬಿಹಾರಿ ವಾಜಪೇಯಿ ಕಾಲೇಜು ಮತ್ತು ಸಂಶೋಧನಾ ಕೇಂದ್ರಗಳ ಸೀಟು ಹೆಚ್ಚಳವಾಗಲಿದೆ. ಬೀದರ, ಚಾಮರಾಜನಗರ, ಗದಗ, ಕಾರವಾರ, ಕೊಪ್ಪಳ, ಮಂಡ್ಯ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸೀಟು ಹೆಚ್ಚಳದ ಮನವಿಯನ್ನು ತಿರಸ್ಕರಿಸಲಾಗಿದೆ.

ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ತಲಾ 100 ಸೀಟುಗಳ ಹೆಚ್ಚಳಕ್ಕೆ ಮನವಿ ಮಾಡಲಾಗಿತ್ತು. ತಲಾ 50 ಸೀಟುಗಳನ್ನು ಅನುಮೋದಿಸಿದೆ. ಹುಬ್ಬಳ್ಳಿಯ ಜೆಜೆಎಂಎಂ ಕಾಲೇಜಿಗೂ (ಡೀಮ್ಡ್‌) 50 ಸೀಟು ಹೆಚ್ಚಳ ಮಾಡಲಾಗಿದೆ.

Soujanya Case: ಸೌಜನ್ಯ ಪ್ರಕರಣಕ್ಕೆ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌

You may also like