Home » Central Gvt: ಅಂಗಾಂಗ ದಾನ ಮಾಡುವ ಸರ್ಕಾರಿ ನೌಕರರಿಗೆ 42 ದಿನ ರಜೆ – ಸರ್ಕಾರದಿಂದ ಘೋಷಣೆ

Central Gvt: ಅಂಗಾಂಗ ದಾನ ಮಾಡುವ ಸರ್ಕಾರಿ ನೌಕರರಿಗೆ 42 ದಿನ ರಜೆ – ಸರ್ಕಾರದಿಂದ ಘೋಷಣೆ

0 comments

Central Gvt: ಕೇಂದ್ರ ಸರ್ಕಾರಿ ನೌಕರರು ತಮ್ಮ ಅಂಗಾಂಗ ದಾನ ಮಾಡಿದರೆ ಅವರಿಗೆ 42 ದಿನಗಳ ಕಾಲ ಸಾಂದರ್ಭಿಕ ರಜೆಯನ್ನು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಲೋಕಸಭೆಯಲ್ಲಿ ಕೇಳಿದ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಸಿಬ್ಬಂದಿ ಖಾತೆ ಸಚಿವ ಜಿತೇಂದ್ರ ಸಿಂಗ್ ಅವರು ‘ ಕೇಂದ್ರ ಸರ್ಕಾರಿ ನೌಕರರು ತಮ್ಮ ಅಂಗಾಂಗ ದಾನ ಮಾಡಲು ಬಯಸಿದರೆ, ದಾನಿಗಳ ಅಂಗಾಂಗ ಪಡೆಯಲು ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಕೈಗೊಂಡಿದ್ದರೂ ಸರ್ಕಾರಿ ನೋಂದಾಯಿತ ವೈದ್ಯರ ಸಲಹೆಯಂತೆ ಈ ವಿಶೇಷ ಸಾಂದರ್ಭಿಕ ರಜೆಯ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ವಿವರಿಸಿದ್ದಾರೆ.

ಅಲ್ಲದೆ ಈ ಬಗ್ಗೆ 2023ರಲ್ಲೇ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ. ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ದಿನದಿಂದಲೇ ವಿಶೇಷ ಸಾಂದರ್ಭಿಕ ರಜೆಯನ್ನು ಪಡೆದುಕೊಳ್ಳಬಹುದು. ಅಗತ್ಯವಿದ್ದರೆ ವೈದ್ಯರ ಶಿಫಾರಸಿನಂತೆ ಶಸ್ತ್ರಚಿಕಿತ್ಸೆಗಿಂತ ಒಂದು ವಾರ ಮುನ್ನ ರಜೆ ತೆಗೆದುಕೊಳ್ಳುವುದಕ್ಕೂ ಅವಕಾಶ ಇದೆ’ ಎಂದು ವಿವರಿಸಿದ್ದಾರೆ.

You may also like