Home » ಪುಂಡರ ಪುಂಡಾಟ: 45 ಮಂದಿ ಬೈಕ್ ವೀಲಿಂಗ್ ವೀರರ ಬಂಧನ

ಪುಂಡರ ಪುಂಡಾಟ: 45 ಮಂದಿ ಬೈಕ್ ವೀಲಿಂಗ್ ವೀರರ ಬಂಧನ

0 comments

Bengaluru: ನಗರದಲ್ಲಿ ರಾತ್ರಿಯ ವೇಳೆ ವೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದೆ. ಇದೀಗ ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸ್ವತಃ ಪೊಲೀಸರೇ ಫೀಲ್ಡ್ ಗೆ ಇಳಿದಿದ್ದು, 45 ಜನರನ್ನು ಬಂಧಿಸಿದ್ದಾರೆ. ಪುಂಡರ ಹುಚ್ಚಾಟದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕಾರ್ಯಚರಣೆ ನಡೆಸಿದ ಪೊಲೀಸರು ಕೆ. ಆರ್ ಪುರಂ ಬಳಿ 17 ಯುವಕರನ್ನು ತಡೆದಿದ್ದಾರೆ. ಅಲ್ಲದೇ ವಿಲ್ಲಿಂಗ್ ಮಾಡುತ್ತಿದ್ದ 58 ಜನರ ವಿರುದ್ಧ ದೂರು ದಾಖಲಿಸಿದ್ದು, 45 ಜನರನ್ನು ವಶಕ್ಕೆ ಪಡೆಯಲಾಗಿದೆ.

ಅಷ್ಟೇ ಅಲ್ಲದೆ ಅಪರಾಧಿಗಳಿಗೆ 25 ಸಾವಿರದ ವರೆಗೆ ದಂಡ ವಿಧಿಸಲಾಗಿದ್ದು, ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಯುವಕರ ಲೈಸೆನ್ಸ್‌ ಹಾಗೂ ವಾಹನದ ದಾಖಲೆಯನ್ನು ರದ್ದು ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ವಿಲ್ಲಿಂಗ್‌ ಮಾಡಿ ಬಂಧಿತರಾದವರಲ್ಲಿ ಹೆಚ್ಚಾಗಿ ಅಲ್ಪ ವಯಸ್ಕರರು ಎಂದು ಹೇಳಲಾಗುತ್ತಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 281ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಇನ್ನು ವೀಲಿಂಗ್ ತಡೆಗಟ್ಟಲು ನಗರದ ಹಳೆ ಮದ್ರಾಸ್ ರಸ್ತೆ, ತುಮಕೂರು ರಸ್ತೆ, ಅದರಲ್ಲೂ ಪೀಣ್ಯ ಫೈಓವರ್ ಬಳಿ ಕೆಂಪೇಗೌಡ ನಿಲ್ದಾಣ ರಸ್ತೆಯ ಕಾರಿಡಾರ್ ಸೇರಿದಂತೆ ಹಲವೆಡೆ ಪೊಲೀಸರು ಕಣ್ಣಾವಲು ಹೆಚ್ಚಿಸಿದ್ದಾರೆ.

You may also like