Home » Medical Students: ಮದುವೆಗೆಂದು ಹೋದವರು, ಸಮುದ್ರದಲ್ಲಿ ಈಜಾಡಲು ಹೋಗಿ 5 ಮೆಡಿಕಲ್‌ ವಿದ್ಯಾರ್ಥಿಗಳು ದಾರುಣ ಸಾವು

Medical Students: ಮದುವೆಗೆಂದು ಹೋದವರು, ಸಮುದ್ರದಲ್ಲಿ ಈಜಾಡಲು ಹೋಗಿ 5 ಮೆಡಿಕಲ್‌ ವಿದ್ಯಾರ್ಥಿಗಳು ದಾರುಣ ಸಾವು

1 comment
Medical Students

Medical Students: ಐವರು ಮೆಡಿಕಲ್‌ ವಿದ್ಯಾರ್ಥಿಗಳು ಮದುವೆ ಸಮಾರಂಭಕ್ಕೆಂದು ಬಂದಿದ್ದು, ಇದೇ ವೇಳೆ ಲೆಮುರ್‌ ಬೀಚ್‌ (Lemur Beach) ನಲ್ಲಿ ಈಜಾಡುವಾಗ ನೀರುಪಾಲಾಗಿರುವ ಘಟನೆಯೊಂದು ನಡೆದಿದೆ. ಈ ಐವರಲ್ಲಿ ಇಬ್ಬರು ಯುವತಿಯರೂ ಕೂಡಾ ಇದ್ದಾರೆನ್ನಲಾಗಿದೆ.

ಈ ಐವರೂ ತಿರುಚಿರಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್‌ ಕಾಲೇಜಿನವರು ಎಂದು ಹೇಳಲಾಗಿದೆ.

ತಂಜಾವೂರಿನ ಚಾರುಕವಿ, ನೇಯ್‌ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್‌, ದಿಂಡಿಗಲ್‌ನ ಪ್ರವೀಣ್‌ ಸ್ಯಾಮ್‌ , ಆಂಧ್ರಪ್ರದೇಶದ ವೆಂಕಟೇಶ್‌ ಎಂಬುವವರೇ ಮೃತ ವಿದ್ಯಾರ್ಥಿಗಳು. ಒಟ್ಟು ಎಂಟು ವಿದ್ಯಾರ್ಥಿಗಳು ಈಜಾಡಲು ಹೋಗಿದ್ದು ಇವರಲ್ಲಿ ಐವರು ನೀರುಪಾಲಾಗಿದ್ದಾರೆ. ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಈ ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಲೆಮುರ್‌ ಬೀಚ್‌ಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಭಾನುವಾರ ಮದುವೆಗೆ ಬಂದಿದ್ದ ವಿದ್ಯಾರ್ಥಿಗಳು ಅವರಲ್ಲೇ ಗುಂಪುಗಳು ಚದುರಿ ಹೋಗಿದ್ದಾರೆ. ಸಮುದ್ರದಲ್ಲಿ ಭಾರಿ ಅಲೆಗಳಿರುವ ಕಾರಣ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಆದರೂ ಅವರು ಅಲ್ಲಿಗೆ ಹೇಗೆ ಹೋಗಿದ್ದರು ಎಂಬ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Dharmasthala: ಮಗುಚಿ ಬಿದ್ದ ಆಟೋ-ಹಿಂದಿನಿಂದ ಬಂದ ಕಾರುಗಳು ಡಿಕ್ಕಿ

You may also like

Leave a Comment