Home » Illegal immigrants: ರಾಜ್ಯದಲ್ಲಿ 500 ಮಂದಿ ಅಕ್ರಮ ನಿವಾಸಿಗಳು ಪತ್ತೆ – ವಿದೇಶಿ ಪ್ರಜೆಗಳು ವಾಸವಿರುವ ಸ್ಥಳಗಳಲ್ಲಿ ನಿಗಾ

Illegal immigrants: ರಾಜ್ಯದಲ್ಲಿ 500 ಮಂದಿ ಅಕ್ರಮ ನಿವಾಸಿಗಳು ಪತ್ತೆ – ವಿದೇಶಿ ಪ್ರಜೆಗಳು ವಾಸವಿರುವ ಸ್ಥಳಗಳಲ್ಲಿ ನಿಗಾ

0 comments

Illegal immigrants: ರಾಜ್ಯದಲ್ಲಿ ವೀಸಾ ಅವಧಿ ಮೀರಿ ವಾಸವಾಗಿರುವ 500 ಮಂದಿ ಅಕ್ರಮ ನಿವಾಸಿಗಳನ್ನು ಪತ್ತೆಹಚ್ಚಲಾಗಿದ್ದು, ಈ ಪೈಕಿ 304 ಮಂದಿಯನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 266 ಮಂದಿ ಅಕ್ರಮ ನಿವಾಸಿಗಳಿದ್ದು, ಬೆಂಗಳೂರು ಜಿಲ್ಲೆಯಲ್ಲಿ 63, ಮಂಗಳೂರಲ್ಲಿ 41, ಮೈಸೂರಲ್ಲಿ 10 ಹಾಗೂ ಇತರೆಡೆ ಅಕ್ರಮ ನಿವಾಸಿಗಳಿದ್ದಾರೆ. ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿ, ನಿಯಮ ಉಲ್ಲಂಘನೆ ಹಿನ್ನೆಲೆ ರಾಜ್ಯದಲ್ಲಿ 229 ವಿದೇಶಿಗರ ವಿರುದ್ಧ ಒಟ್ಟು 61 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು?

– ಬೆಂಗಳೂರು ನಗರ – 266

– ಬೆಂಗಳೂರು ಜಿಲ್ಲೆ- 63

– ಬೆಳಗಾವಿ ನಗರ – 12

– ಚಿತ್ರದುರ್ಗ – 6

– ಧಾರವಾಡ – 2

– ಕೆಜಿಎಫ್ – 8

– ಕೊಡಗು -2

– ಮಂಗಳೂರು ನಗರ – 41

– ಮೈಸೂರು ನಗರ -26

– ರಾಯಚೂರು – 1

– ರಾಮನಗರ -11

– ಶಿವಮೊಗ್ಗ- 12

– ತುಮಕೂರು- 1

– ಉಡುಪಿ- 10

– ವಿಜಯಪುರ – 33

ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಹಾಗೂ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಹಾಯ ಮಾಡಿದ ಒಟ್ಟು 5 ಜನರ ವಿರುದ್ಧ ಕೂಡ ಕ್ರಮ ತೆಗೆದುಕೊಳಳಲಾಗಿದೆ. ಈ ಸಂಬಂಧ ಬೆಂಗಳೂರು ನಗರದಲ್ಲಿ 1, ಬೆಂಗಳೂರು ಜಿಲ್ಲೆಯಲ್ಲಿ 3 ಹಾಗೂ ಉಡುಪಿ ಜಿಲ್ಲೆಯಲ್ಲಿ 1 ಪ್ರಕರಣ ದಾಖಲಿಸಲಾಗಿದೆ.

ರಾಜ್ಯದಲ್ಲಿ ಅಕ್ರಮ ನಿವಾಸಿಗಳ ವಿರುದ್ಧ ಕ್ರಮ ಕೈಗೊಳ್ಳಲು ಗುಪ್ತಚರ ಇಲಾಖೆಗೆ ಆದೇಶ ನೀಡಲಾಗಿದೆ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸ್ ಠಾಣಾ ಮಟ್ಟದಲ್ಲಿ ಗುಪ್ತಚರ ಸಿಬ್ಬಂದಿ ಹಾಗೂ ಕೈಂ ಸಿಬ್ಬಂದಿಗಳು ವಿದೇಶೀಯರ ಚಲನವಲನಗಳ ಮೇಲೆ ನಿಗಾ ವಹಿಸುವಂತೆ ಸೂಕ್ತ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ ಚಿಂದಿ ಆಯುವ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಮತ್ತು ಅವರು ನೆಲೆಸಿರುವ ಸ್ಥಳ, ಅವರ ಚಲನವಲನಗಳ ಮೇಲೆ ಹೆಚ್ಚಿನ ನಿಗಾವಹಿಸುವಂತೆ ಠಾಣಾ ಮಟ್ಟದಲ್ಲಿ ಎಲ್ಲಾ ಘಟಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

India Post: ಆ.25ರಿಂದ ಅಮೆರಿಕಕ್ಕೆ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತ – ಟ್ರಂಪ್‌ ಸುಂಕಕ್ಕೆ ಭಾರತ ತಿರುಗೇಟು

You may also like