Home » Mysterious Death: ಬಾಲಕನ ಹೊಟ್ಟೆಯಲ್ಲಿ 56 ಲೋಹದ ತುಣುಕುಗಳು!! ಆಪರೇಷನ್ ಮಾಡಿದರು ಬದುಕುಳಿಯದ ಬಾಲಕ!

Mysterious Death: ಬಾಲಕನ ಹೊಟ್ಟೆಯಲ್ಲಿ 56 ಲೋಹದ ತುಣುಕುಗಳು!! ಆಪರೇಷನ್ ಮಾಡಿದರು ಬದುಕುಳಿಯದ ಬಾಲಕ!

0 comments

Mysterious Death: ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿ ಆದಿತ್ಯ ದೀರ್ಘಕಾಲದಿಂದ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ನಂತರ ಅಲ್ಟ್ರಾಸೌಂಡ್ ಮೂಲಕ ವೈದ್ಯರು ಹುಡುಗನ ಹೊಟ್ಟೆಯಲ್ಲಿ ಗಡಿಯಾರದ ಬೆಲ್ಟ್, ಬ್ಲೇಡ್ ತುಂಡು, ಮೊಳೆ ಸೇರಿದಂತೆ ಸುಮಾರು 56 ಲೋಹದ ತುಂಡುಗಳನ್ನು ಪತ್ತೆ ಹಚ್ಚಿದ್ದಾರೆ.

ಹೌದು, ಹಥ್ರಾಸ್‌ನ ರತ್ನಗರ್ಭಾ ಕಾಲೋನಿಯ ನಿವಾಸಿ ಸಂಚೇತ್ ಶರ್ಮಾ ಅವರ ಪುತ್ರ ಇತ್ತೀಚೆಗೆ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆದರೆ, ಇಲ್ಲಿ ಹುಡುಗನ ಸ್ಥಿತಿ ಹದಗೆಟ್ಟಾಗ ಅಕ್ಟೋಬರ್ 26 ರಂದು ಆದಿತ್ಯನ ಹೊಟ್ಟೆಯ ಅಲ್ಟ್ರಾಸೌಂಡ್ ಅನ್ನು ಖಾಸಗಿ ಅಲ್ಟ್ರಾಸೌಂಡ್ ಕೇಂದ್ರದಲ್ಲಿ ಮಾಡಲಾಯಿತು ಮತ್ತು ಅಲ್ಲಿ 19 ಅಸಹಜ ಲೋಹದ ತುಂಡುಗಳು ಕಂಡುಬಂದವು. ಇದರ ನಂತರ ಇಲ್ಲಿನ ವೈದ್ಯರು ಆದಿತ್ಯನನ್ನು ನೋಯ್ಡಾದ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದರು. ನಂತರ ಅವರನ್ನು ಅಲ್ಲಿಗೆ ಕರೆದೊಯ್ಯಲಾಯಿತು.

ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ವರದಿಯು ಆದಿತ್ಯನ ಹೊಟ್ಟೆಯಲ್ಲಿ ಸುಮಾರು 56 ವಸ್ತುಗಳಿವೆ ಎಂದು ತೋರಿಸಿದೆ. ಈ ಹಿನ್ನಲೆ ಅಕ್ಟೋಬರ್ 27 ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಎಲ್ಲಾ ವಸ್ತುಗಳನ್ನು ತೆಗೆದು ಹಾಕಲಾಯಿತು ಮತ್ತು ಅವರ ಹೊಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು. ಆದರೆ, ದುರದೃಷ್ಟವಶಾತ್, ಚಿಕಿತ್ಸೆಯ ನಂತರ ಅಕ್ಟೋಬರ್ 28 ರಂದು ರಾತ್ರಿ ಆದಿತ್ಯ ಮೃತಪಟ್ಟಿದ್ದಾನೆ.

You may also like

Leave a Comment