Home » PM Kissan yojana: ರಾಜ್ಯ ರೈತರಿಗೆ ಬಿಗ್ ಶಾಕ್ – ಕಿಸಾನ್ ಸಮ್ಮಾನ್ ಫಲಾನುಭವಿಗಳ ಸಂಖ್ಯೆಯಲ್ಲಿ 6 ಲಕ್ಷ ಕುಸಿತ!! ಕೇಂದ್ರ ಹೇಳಿದ್ದಿಷ್ಟು

PM Kissan yojana: ರಾಜ್ಯ ರೈತರಿಗೆ ಬಿಗ್ ಶಾಕ್ – ಕಿಸಾನ್ ಸಮ್ಮಾನ್ ಫಲಾನುಭವಿಗಳ ಸಂಖ್ಯೆಯಲ್ಲಿ 6 ಲಕ್ಷ ಕುಸಿತ!! ಕೇಂದ್ರ ಹೇಳಿದ್ದಿಷ್ಟು

0 comments
PM Kisan 15th installment

PM Kissan yojana: ಕರ್ನಾಟಕದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯ (ಪಿಎಂ-ಕಿಸಾನ್‌) ಫಲಾನುಭವಿಗಳ ಸಂಖ್ಯೆ ಐದು ಲಕ್ಷದಿಂದ ಆರು ಲಕ್ಷದಷ್ಟು ಕುಸಿತವಾಗಿದೆ. 

ಲೋಕಸಭೆಯಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್‌ ಮಂಗಳವಾರ ಕೇಳಿದ ಪ್ರಶ್ನೆಗೆ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್‌ ಠಾಕೂರ್‌ ಉತ್ತರ ನೀಡಿದ್ದು, 13ನೇ ಕಂತಿನವರೆಗೆ (2023ರ ಮಾರ್ಚ್) ರಾಜ್ಯದ ಫಲಾನುಭವಿಗಳ ಸಂಖ್ಯೆ 49 ಲಕ್ಷದಷ್ಟು ಇತ್ತು. 14ನೇ ಕಂತಿನಲ್ಲೂ ಫಲಾನುಭವಿಗಳ ಸಂಖ್ಯೆ 49.34 ಲಕ್ಷ ಆಗಿತ್ತು. 15ನೇ ಕಂತಿನಲ್ಲಿ ಈ ಸಂಖ್ಯೆ 43.78 ಲಕ್ಷಕ್ಕೆ ಕುಸಿಯಿತು. ಆ ಬಳಿಕ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿಲ್ಲ. 

ಇನ್ನು ಪಿಎಂ- ಕಿಸಾನ್‌ (PM Kissan yojana ) ಯೋಜನೆಯಡಿ ಕೃಷಿಕರಿಗೆ ವಾರ್ಷಿಕ ₹6 ಸಾವಿರ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಈ ಮೊತ್ತವನ್ನು ₹8 ಸಾವಿರ ಅಥವಾ ₹12 ಸಾವಿರಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

You may also like

Leave a Comment