Home » Namma Metro : ‘ನಮ್ಮ ಮೆಟ್ರೋ’ದಿಂದ ದೂರ ಉಳಿದ 6 ಲಕ್ಷ ಪ್ರಯಾಣಿಕರು!!

Namma Metro : ‘ನಮ್ಮ ಮೆಟ್ರೋ’ದಿಂದ ದೂರ ಉಳಿದ 6 ಲಕ್ಷ ಪ್ರಯಾಣಿಕರು!!

0 comments

Namma Metro: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳದ ನಂತರ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು ಬರೋಬ್ಬರಿ ಆರು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಹೌದು, ಫೆಬ್ರವರಿ 9 ರಂದು ಜಾರಿಗೆ ಬರುವಂತೆ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಕೆಲವು ಸ್ಟೇಷನ್​ಗಳ ಮಧ್ಯೆ ಪ್ರಯಾಣ ದರವನ್ನು ತುಸು ಇಳಿಕೆ ಮಾಡಲಾಗಿದೆ. ಆದರೂ ಪ್ರಯಾಣಿಕರ ಆಕ್ರೋಶ ತಣ್ಣಗಾಗಿಲ್ಲ. ಈ ಹಿನ್ನೆಲೆಯಲ್ಲಿ ನಿತ್ಯ ಮೆಟ್ರೋವನ್ನು ಅವಲಂಬಿಸಿದ್ದ ಪ್ರಯಾಣಿಕರು ಇದೀಗ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಹೀಗಾಗಿ ಬರೋಬ್ಬರಿ ಆರು ಲಕ್ಷ ಪ್ರಯಾಣಿಕರು ಮೆಟ್ರೋದಿಂದ ದೂರ ಉಳಿದಿದ್ದಾರೆ.

ಬಿಎಂಆರ್‌ಸಿಎಲ್ ಅಂಕಿಅಂಶಗಳ ಪ್ರಕಾರ, ಪರಿಷ್ಕೃತ ದರಗಳು ಜಾರಿಗೆ ಬಂದ ನಂತರದ ಮೊದಲ ವಾರ, ಫೆಬ್ರವರಿ 10 ರಿಂದ 14 ರವರೆಗಿನ ಸರಾಸರಿ ಪ್ರಯಾಣಿಕರ ಸಂಖ್ಯೆ 7.72 ಲಕ್ಷ. ಇದು ಅದಕ್ಕಿಂತ ಹಿಂದಿನ ಕೆಲಸದ ವಾರದಲ್ಲಿ (ಫೆಬ್ರವರಿ 4 – 8) ದಾಖಲಾದ 8.62 ಲಕ್ಷ ಪ್ರಯಾಣಿಕರಿಗಿಂತ ತೀವ್ರ ಕುಸಿತವನ್ನು ಸೂಚಿಸಿದೆ.

You may also like