Home » Hassan : 60 ಗೋವುಗಳ ಕೊಂದು, ರಕ್ತವನ್ನು ಕೆರೆಗೆ ಹರಿಸಿದ ಪಾಪಿಗಳು – 10 ಸಾವಿರ ಕೆಜಿ ಗೋ ಮಾಂಸ ಪೋಲಿಸ್ ವಶಕ್ಕೆ !!

Hassan : 60 ಗೋವುಗಳ ಕೊಂದು, ರಕ್ತವನ್ನು ಕೆರೆಗೆ ಹರಿಸಿದ ಪಾಪಿಗಳು – 10 ಸಾವಿರ ಕೆಜಿ ಗೋ ಮಾಂಸ ಪೋಲಿಸ್ ವಶಕ್ಕೆ !!

1 comment

Hassan : ಅಕ್ರಮ ಗೋ ಸಾಗಾಟ, ಗೋ ಮಾಂಸ ಸಾಗಟಕ್ಕೆ ಸರ್ಕಾರ ಎಷ್ಟೇ ತಡೆ ತಂದರೂ ಅದು ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ದಿನಂಪ್ರತಿ ಈ ಕೇಸ್ ಗಳು ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ಅಕ್ರಮ ಗೋಮಾಂಸಕ್ಕಾಗಿ ಪಾಪಿಗಳು ಬರೋಬ್ಬರಿ 60 ಗೋವುಗಳನ್ನು ಕೊಂದಿದ್ದು, ಪೋಲೀಸರು ಬರೋಬ್ಬರಿ 10 ಸಾವಿರ ಕೆಜಿ ಗೋ ಮಾಂಸವನ್ನು ವಶಪಡಿಸಿಕೊಂಡ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Bank Holiday in April 2024: ಏಪ್ರಿಲ್‌ ತಿಂಗಳಲ್ಲಿ 14 ದಿನ ಬ್ಯಾಂಕ್‌ ರಜೆ

ಹೌದು, ಹಾಸನ(Hassan) ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆ ಬಳಿ ಈ ಘಟನೆ ನಡೆದಿದ್ದು, ಅಕ್ರಮವಾಗಿ ಗೋಮಾಂಸ ಮಾರಾಟಕ್ಕಾಗಿ 60 ಕ್ಕೂ ಹೆಚ್ಚು ಗೋವುಗಳನ್ನು ವಧೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿಖರ ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ಮಾಡಿದ ಪೊಲೀಸರು, 10 ಸಾವಿರ ಕೆಜಿ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ 5 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Umar Ansari: “ನನ್ನ ತಂದೆಗೆ ಸ್ಲೋ ಪಾಯ್ಸನ್ ನೀಡಿ ಸಾಯಿಸಲಾಗಿದೆ” : ಮುಖ್ತಾರ್ ಅನ್ಸಾರಿ ಪುತ್ರ ಉಮರ್ ಅನ್ಸಾರಿ ಆರೋಪ

ಅಂದಹಾಗೆ ಮಹಮದ್ ಅಬ್ದುಲ್ ಹಕ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದೆ. ಪೋಲೀಸರು ಸ್ಥಳಕ್ಕಾಗಮಿಸುವ ವೇಳೆ ಸುಮಾರು 60 ಕ್ಕೂ ಗೋವುಗಳನ್ನು ಹತ್ಯೆ ಮಾಡಿ ನೇತು ನೇತುಹಾಕಲಾಗಿತ್ತು ಎನ್ನಲಾಗಿದೆ. ಅಲ್ಲದೆ ಅಷ್ಟೂ ಗೋವುಗಳ ರಕ್ತವನ್ನು ಕೆರೆಗೆ ಹರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ

You may also like

Leave a Comment