Home » Zameer Ahammad: ಮುಸ್ಲಿಮರಿಗೆ 60 ಸಾವಿರ ಕೋಟಿ ನೀಡಬೇಕಿತ್ತು – ಬಜೆಟ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ

Zameer Ahammad: ಮುಸ್ಲಿಮರಿಗೆ 60 ಸಾವಿರ ಕೋಟಿ ನೀಡಬೇಕಿತ್ತು – ಬಜೆಟ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ

0 comments

Zameer Ahammad: ರಾಜ್ಯ ಸರ್ಕಾರದಿಂದ ಮಂಡನೆಯಾದ ಬಜೆಟ್ ಕುರಿತು ಬಾರಿ ಪರ ವಿರೋಧ ಚರ್ಚೆಗಳು ಆಗುತ್ತಿವೆ. ಮುಸ್ಲಿಂ ಸಮುದಾಯಕ್ಕೆ ಸಿದ್ದರಾಮಯ್ಯ ಬರಪೂರ ಕೊಡುಗೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ನಡುವೆಯೇ ಸಚಿವ ಜಮೀರ್ ಅಹ್ಮದ್(Zameer Ahammad) ಅವರು ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದು, ನಮ್ಮ ಸಮುದಾಯದ ಜನಸಂಖ್ಯೆಯನ್ನು ಗಮನಿಸಿದರೆ 60,000 ಕೋಟಿ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಅವರು ಮಸೀದಿ ಇಮಾಮ್‌ಗಳ ಗೌರವಧನ ಹೆಚ್ಚಳ- ವಕ್ಪ್ ಸಂಸ್ಥೆಗಳ ಜೀರ್ಣೋದ್ಧಾರ ಸೇರಿದಂತೆ ಮುಸ್ಲಿಂ ಸಮುದಾಯಕೆ ಒಟ್ಟು 4,700 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಹೀಗಾಗಿ ಇದು ಮುಸ್ಲಿಂ ಬಜೆಟ್ ಎಂಬ ಬಿಜೆಪಿ ಟೀಕೆಗಳಿಗೂ ಪ್ರತಿಕ್ರಿಯೆ ನೀಡಿರುವ ಅವರು, ಇದು ಮುಸ್ಲಿಂ ಬಜೆಟ್ ಹೇಗೆ ಆಗಲು ಸಾಧ್ಯ? ರಾಜ್ಯದ ಒಟ್ಟು ಜನಸಂಖ್ಯೆಯ ಶೇ.14 ರಷ್ಟು ಮುಸ್ಲಿಂ ಸಮುದಾಯದವರಿದ್ದಾರೆ. ನಮ್ಮ ಜನಸಂಖ್ಯೆಯ ಪ್ರಕಾರ ನೋಡೋಕೆ ಹೋದರೆ, ಮುಸ್ಲಿಂ ಸಮುದಾಯಕ್ಕೆ ಕನಿಷ್ಠ 60,000 ಕೋಟಿ ರೂಪಾಯಿಗಳನ್ನು ಕೊಡಬೇಕಿತ್ತು. ಆದರೆ ಕೊಟ್ಟಿರುವುದು ಕೇವಲ 4,700 ಕೋಟಿಯಷ್ಟೇ ಬಿಜೆಪಿಯವರಿಗೆ ಅಷ್ಟೂ ಕಾಮನ್ ಸೆನ್ಸ್ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.

You may also like