Marriage: ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ಏಕೆಂದರೆ ವಿಡಿಯೋದಲ್ಲಿ 25 ವರ್ಷದ ಹುಡುಗಿ ಜೊತೆ 70 ವರ್ಷದ ವ್ಯಕ್ತಿ ಮದುವೆಯಾಗಿದ್ದಾರೆ. ವಿಶೇಷ ಅಂದ್ರೆ ಪರಸ್ಪರ ಒಪ್ಪಿಗೆಯಿಂದ ಈ ಮದುವೆ ನಡೆದಿದೆಯಂತೆ.
ವಿಡಿಯೋದಲ್ಲಿ, ಮೊಮ್ಮಗಳು ಮತ್ತು ಅಜ್ಜ ಮದುವೆಯ ನಂತರ ತುಂಬಾ ಸಂತೋಷಗೊಂಡಿರುವುದನ್ನು ಕಾಣಬಹುದು. ಮೊಮ್ಮಗಳನ್ನು ಮದುವೆಯಾದ ನಂತರ, ವೃದ್ಧರು, ‘ಈ ಹುಡುಗಿ ಹುಟ್ಟಿದಾಗ, ನಾನು ಅವಳನ್ನು ಪ್ರೀತಿಸುತ್ತಿದ್ದೆ. ಹುಡುಗಿ ಬೆಳೆಯಲು ನಾನು ಕಾಯುತ್ತಿದ್ದೆ. ಕೊನೆಗೆ, ಅವಳು ಬೆಳೆದಾಗ, ನಾವು ಮದುವೆಯಾದೆವು…’ ಎಂದು ತಾತ ಹೇಳಿಕೊಂಡಿದ್ದಾನೆ.
ಇನ್ನು ತನ್ನ ಅಜ್ಜನನ್ನು ಮದುವೆಯಾದ ಹುಡುಗಿ.. ‘ಮದುವೆಯಾದ ನಂತರ ನಾನು ತುಂಬಾ ಸಂತೋಷವಾಗಿದ್ದೇನೆ. ನನ್ನ ಅಜ್ಜ ಯಾವಾಗಲೂ ನನ್ನನ್ನು ಗೌರವಿಸುತ್ತಿದ್ದ, ಪ್ರೀತಿಸುತ್ತಿದ್ದ. ಈ ಮದುವೆಯಲ್ಲಿ ನನಗೆ ಯಾವುದೇ ಸಮಸ್ಯೆ ಅನಿಸುತ್ತಿಲ್ಲ…’ ಎಂದು ಹೇಳಿಕೊಂಡಿದ್ದಾಳೆ.
ಈ ವೀಡಿಯೊವನ್ನು ಮೊದಲು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು, ನಂತರ ಅದು ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದಾಗ ಸಖತ್ ವೈರಲ್ ಆಗಿದೆ. ಈ ವಿಡಿಯೋ ಹಲವರು ಹಲವು ರೀತಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: MP: ಹಾವುಗಳಿಗೆ ಜನ್ಮ ನೀಡಿದ ಮಹಿಳೆ? ಅಚ್ಚರಿ ಸತ್ಯ ಬಿಚ್ಚಿಟ್ಟ ವೈದ್ಯರು
