Home » Bullet Train: ಭಾರತದಲ್ಲಿ 7,000ಕಿ.ಮೀ ಬುಲೆಟ್ ರೈಲು ಓಡಲಿದೆ: ಜಪಾನ್‌ನಿಂದ 10 ವರ್ಷಗಳಲ್ಲಿ 5.9 ಲಕ್ಷ ಕೋಟಿ ಭಾರತದಲ್ಲಿ ಹೂಡಿಕೆ

Bullet Train: ಭಾರತದಲ್ಲಿ 7,000ಕಿ.ಮೀ ಬುಲೆಟ್ ರೈಲು ಓಡಲಿದೆ: ಜಪಾನ್‌ನಿಂದ 10 ವರ್ಷಗಳಲ್ಲಿ 5.9 ಲಕ್ಷ ಕೋಟಿ ಭಾರತದಲ್ಲಿ ಹೂಡಿಕೆ

0 comments

Bullet Train: ಜಪಾನ್ ಜತೆಗಿನ ಪಾಲುದಾರಿಕೆಯಲ್ಲಿ ಭಾರತದಲ್ಲಿ ಬುಲೆಟ್ ರೈಲುಗಳ ದೊಡ್ಡ ಪ್ರಮಾಣದ ವಿಸ್ತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು (ಬುಲೆಟ್ ರೈಲು) ಭಾರತ ಮತ್ತು ಜಪಾನ್ ನಡುವಿನ ಪ್ರಮುಖ ಯೋಜನೆಯಾಗಿದೆ ಎಂದು ಪ್ರಧಾನಿ ಮೋದಿ ಶುಕ್ರವಾರ ಜಪಾನ್‌ನಲ್ಲಿ ಹೇಳಿದರು. ಇದರ ಹೊರತಾಗಿ, ದೇಶದಲ್ಲಿ 7,000 ಕಿಲೋಮೀಟರ್‌ಗಳವರೆಗೆ ಹೈಸ್ಪೀಡ್ ರೈಲು ಜಾಲವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ದಕ್ಷಿಣ ಭಾರತದ ಹೈದರಾಬಾದ್, ಅಮರಾವತಿ, ಚೆನ್ನೈ ಹಾಗೂ ಬೆಂಗಳೂರು ನಡುವೆ ಬುಲೆಟ್ ರೈಲು ಸಂಪರ್ಕ ಅನುಷ್ಠಾನಗೊಳ್ಳಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಆಹಾರ ಉತ್ಪಾದನಾ ಸಮ್ಮೇಳನದಲ್ಲಿ ಮಾತನಾಡಿದ ಅವರು, “ದಕ್ಷಿಣದ ಭಾರತದ ಈ ನಾಲ್ಕು ಪ್ರಮುಖ ನಗರಗಳ ಐದು ಕೋಟಿ ಜನರಿಗೆ ಬುಲೆಟ್ ರೈಲಿನಿಂದ ನೆರವಾಗಲಿದೆ. ಅತಿ ಶೀಘ್ರದಲ್ಲಿ ದಕ್ಷಿಣ ಭಾರತಕ್ಕೆ ಈ ಸೌಲಭ್ಯ ಲಭ್ಯವಾಗಲಿದೆ” ಎಂದಿದ್ದಾರೆ.

ಟೋಕಿಯೊದಲ್ಲಿ ನಡೆದ 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಮೋದಿ, 10 ವರ್ಷಗಳ ಬೆಳವಣಿಗೆಯ ಒಪ್ಪಂದ ಮಾಡಿಕೊಂಡಿದ್ದಾರೆ. ಅಲ್ಲದೆ ಮುಂದಿನ ಹತ್ತು ವರ್ಷಗಳಲ್ಲಿ ಜಪಾನ್ 5.9 ಲಕ್ಷ ಕೋಟಿ ಭಾರತದಲ್ಲಿ ಹೂಡಿಕೆ ಮಾಡುವ ಗುರಿಯನ್ನು ಹೋಮದಿದೆ. ಇದೇ ವೇಳೆಪ್ರಧಾನಿ ಮತ್ತು ಜಪಾನ್ ಪ್ರಧಾನಿ 13 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು.

ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 10 ವರ್ಷಗಳ ಹೊಸ ಮಾರ್ಗಸೂಚಿಯನ್ನು ಘೋಷಿಸಿದರು, ಇದು ವ್ಯಾಪಾರ, ತಂತ್ರಜ್ಞಾನ, ಹಸಿರು ಇಂಧನ, ರಕ್ಷಣೆ ಮತ್ತು ಜನರಿಂದ ಜನರಿಗೆ ವಿನಿಮಯದಲ್ಲಿ ಮಹತ್ವಾಕಾಂಕ್ಷೆಯ ಗುರಿಗಳನ್ನು ವಿವರಿಸುತ್ತದೆ.

You may also like