Home » Kerala: ವೃದ್ಧಾಶ್ರಮದಲ್ಲಿ 75 ವರ್ಷದ ಅಜ್ಜಿಯ ಮೇಲೆ 79ರ ಅಜ್ಜನಿಗೆ ಲವ್ – ಎಲ್ಲರ ಸಮ್ಮುಖದಲ್ಲಿ ನಡೆಯಿತು ಮದುವೆ ಮದುವೆ

Kerala: ವೃದ್ಧಾಶ್ರಮದಲ್ಲಿ 75 ವರ್ಷದ ಅಜ್ಜಿಯ ಮೇಲೆ 79ರ ಅಜ್ಜನಿಗೆ ಲವ್ – ಎಲ್ಲರ ಸಮ್ಮುಖದಲ್ಲಿ ನಡೆಯಿತು ಮದುವೆ ಮದುವೆ

by V R
0 comments

Kerala: ಪ್ರೀತಿಗೆ ಕಣ್ಣಿಲ್ಲ ಎಂಬುದು ಫೇಮಸ್ ಆದ ವಾಕ್ಯ. ಆದರೆ ಈಗ ಕಣ್ಣಿಲ್ಲ ಎಂಬುದು ಮಾತ್ರವಲ್ಲ ವಯಸ್ಸು ಕೂಡ ಮುಖ್ಯವಲ್ಲ ಎಂಬುದನ್ನು ಗುವಹಾಟಿ ವೃದ್ಧಾಶ್ರಮದ ಅಜ್ಜ -ಅಜ್ಜಿ ಇಬ್ಬರು ತೋರಿಸಿಕೊಟ್ಟಿದ್ದಾರೆ.

ಹೌದು, ಕೇರಳ ವೃದ್ಧಾಶ್ರಮದಲ್ಲೊಂದು ಬಲು ಅಪರೂಪದ ಘಟನೆ ನಡೆದಿದ್ದು, 75 ವರ್ಷದ ಅಜ್ಜಿಯ ಮೇಲೆ 79 ವರ್ಷದ ಅಜ್ಜನಿಗೆ ಲವ್ ಆಗಿಬಿಟ್ಟಿದೆ. ಇಷ್ಟೇ ಅಲ್ಲದೆ ಅವರು ಇದೀಗ ದಾಂಪತ್ಯ ಜೀವನಕ್ಕೂ ಕಾಲಿರಿಸಿದ್ದಾರೆ. ಮದುವೆಯಾದ ದಂಪತಿಗಳನ್ನು ವಿಜಯರಾಘವನ್ (79) ಮತ್ತು ಸುಲೋಚನಾ (75) ಎಂದು ಗುರುತಿಸಲಾಗಿದೆ.

ಅಂದ ಹಾಗೆ ವಿಜಯ ರಾಘವನ್ ಮತ್ತು ಸುಲೋಚನಾ ಅವರು ವೃದ್ಧಾಶ್ರಮದ ಕಾರಿಡಾರ್‌ನಲ್ಲಿ ಭೇಟಿಯಾಗಿದ್ದರು. ವಿಜಯರಾಘವನ್ 2029 ರಿಂದ ಇಲ್ಲಿ ವಾಸಿಸುತ್ತಿದ್ದರು, ಆದರೆ ಸುಲೋಚನಾ 2024 ರಲ್ಲಿ ಸೇರಿಕೊಂಡರು. ಕಾಲಾನಂತರದಲ್ಲಿ, ಅವರ ಸ್ನೇಹವು ಪ್ರೀತಿಯಾಗಿ ಅರಳಿದೆ. ಅವರ ಬಾಂಧವ್ಯ ಬಲವಾಗುತ್ತಿದ್ದಂತೆ, ದಂಪತಿಗಳು ಮದುವೆಯಾಗಲು ನಿರ್ಧರಿಸಿದರು. ಸೋಮವಾರ (ಜುಲೈ 7) ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು, ನಗರದ ಮೇಯರ್ ಎಂಕೆ ವರ್ಗೀಸ್ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದ ಹೃದಯಸ್ಪರ್ಶಿ ಸಮಾರಂಭದಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಅವರು ವಿವಾಹವಾಗಿದ್ದಾರೆ.

ಸದ್ಯ ಇದೀಗ ಈ ವೃದ್ಧ ದಂಪತಿಯ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ

ಇದನ್ನೂ ಓದಿ: Afghanistan: 6ರ ಬಾಲಕಿಯ ಜೊತೆ 45 ವರ್ಷದವನ ಜೊತೆ ಮದುವೆ: ತಾಲಿಬಾನ್‌ ನೀಡಿದ ಸೂಚನೆ ಏನು?

You may also like