Home » Texas Flood: ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ನಾಪತ್ತೆ!

Texas Flood: ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ನಾಪತ್ತೆ!

0 comments

Texas Flood: ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ (Texas Flood) ಸಾವನ್ನಪ್ಪಿದವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಈ ಪೈಕಿ 28 ಮಕ್ಕಳು ಸೇರಿದ್ದಾರೆ. ಇದರೊಂದಿಗೆ 41 ಮಂದಿ ಕಾಣೆಯಾಗಿದ್ದಾರೆ. ಕಳೆದ 100 ವರ್ಷಗಳಲ್ಲೇ ಇದು ಅತ್ಯಂತ ಭೀಕರ ಪ್ರವಾಹ ಎಂದು ವರದಿಗಳಿಂದ ತಿಳಿದುಬಂದಿದೆ.

ಮುಂದಿನ 48 ಗಂಟೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಹೆಚ್ಚಿನ ಬಿರುಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆದ್ರೆ ಇಲ್ಲಿ ವಿಷಪೂರಿತ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಲಾಗಿದೆ.

ಟೆಕ್ಸಾಸ್‌ನಾದ್ಯಂತ ಸುರಿದ 38 ಸೆಂ.ಮೀ ಮಳೆಯಿಂದಾಗಿ ಹಠಾತ್‌ ಪ್ರವಾಹ ಸಂಭವಿಸಿದೆ. ಸದ್ಯ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವರೆಗೆ 850ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

You may also like