Home » 7th Pay Commission : ತನ್ನ ನೌಕರರಿಗೆ ದೀಪಾವಳಿಯಂದು ಭರ್ಜರಿ ಗಿಫ್ಟ್ ‌ನೀಡಲು ಮುಂದಾದ ಸರಕಾರ!!!

7th Pay Commission : ತನ್ನ ನೌಕರರಿಗೆ ದೀಪಾವಳಿಯಂದು ಭರ್ಜರಿ ಗಿಫ್ಟ್ ‌ನೀಡಲು ಮುಂದಾದ ಸರಕಾರ!!!

0 comments

ಜನತೆಗೆ ಕೇಂದ್ರ ಸರ್ಕಾರ ದೀಪಾವಳಿಗೂ ಮುನ್ನವೆ ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿಯನ್ನು ನೀಡಲು ಅಣಿಯಾಗುತ್ತಿದೆ. ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನಂತೆ ದೀಪಾವಳಿಯಂದು ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಹಣಕಾಸು ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಕೇಂದ್ರದ ಉದ್ಯೋಗಿಗಳಿಗೆ 30 ದಿನಗಳ ಸಂಬಳಕ್ಕೆ ಸಮಾನವಾದ ಉತ್ಪಾದಕತೆ ಆಧಾರಿತ ಬೋನಸ್ (ಆಡ್-ಹಾಕ್ ಬೋನಸ್) ನೀಡಲಾಗುವುದೆಂದು ತಿಳಿಸಲಾಗಿದೆ.

ಇದರಲ್ಲಿ ಕೇಂದ್ರ ಸರ್ಕಾರದ ಗ್ರೂಪ್ ಸಿ ಮತ್ತು ಗ್ರೂಪ್ ಬಿ ವರ್ಗದ ನೌಕರರು ಶಾಮೀಲಾಗಲಿದ್ದಾರೆ.ಗ್ರೂಪ್ ಬಿ ಮತ್ತು ಗ್ರೂಪ್ ಸಿ ಯಲ್ಲಿ ಬರುವ ಗೆಜೆಟೆಡ್ ಅಲ್ಲದ ಕೇಂದ್ರ ಸರ್ಕಾರಿ ನೌಕರರಿಗೆ ಈ ಬೋನಸ್ ನೀಡಲಾಗುತ್ತಿದೆ.

ಇವರು ಯಾವುದೇ ಉತ್ಪಾದಕತೆ ಲಿಂಕ್ಡ್ ಬೋನಸ್ ಯೋಜನೆಯ ಅಡಿಯಲ್ಲಿ ಬರದ ಉದ್ಯೋಗಿಗಳಿಗೆ ಕೂಡ ಇದರ ಲಾಭ ದೊರೆಯುತ್ತದೆ. ಅಷ್ಟೇ ಅಲ್ಲ, ಕೇಂದ್ರೀಯ ಅರೆಸೇನಾ ಪಡೆಗಳ ಉದ್ಯೋಗಿಗಳಿಗೂ ಅಡ್-ಹಾಕ್ ಬೋನಸ್‌ನ ಲಾಭವನ್ನು ನೀಡಲಾಗುವುದರ ಜೊತೆಗೆ ಹಂಗಾಮಿ ಕಾರ್ಮಿಕರಿಗೂ ಸಹ ಇದರ ಲಾಭ ಸಿಗಲಿದೆ.

ಲೆಕ್ಕಾಚಾರದ ಸೀಲಿಂಗ್ ಪ್ರಕಾರ ಉದ್ಯೋಗಿಗಳ ಸರಾಸರಿ ವೇತನದ ಆಧಾರದ ಮೇಲೆ ಬೋನಸ್ ಅನ್ನು ನಿರ್ಧರಿಸಲಾಗುತ್ತದೆ . ಅಂದರೆ, 30 ದಿನಗಳ ಉದ್ಯೋಗಿಗಳ ಮಾಸಿಕ ಬೋನಸ್ ಸುಮಾರು ಒಂದು ತಿಂಗಳ ವೇತನಕ್ಕೆ ಸಮನಾಗಿರುತ್ತದೆ.

ಉದ್ಯೋಗಿಗಳ ಬೋನಸ್ ಅನ್ನು ಹೇಗೆ ಸೇರಿಸಲಾಗುತ್ತದೆ ಎಂಬುದನ್ನೂ ತಿಳಿಯಲು,. ಓರ್ವ ಉದ್ಯೋಗಿ ರೂ 7000 ವೇತನ ಪಡೆಯುತ್ತಿದ್ದರೆ, ಲೆಕ್ಕಾಚಾರದ ಪ್ರಕಾರ, ಆತನಿಗೆ 7000 * 30 / 30.4 = ರೂ 6907.89 (ರೂ 6908) ಬೋನಸ್ ಸಿಗಲಿದೆ.

ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, 31 ಮಾರ್ಚ್ 2021 ರಂದು ಸೇವೆಯಲ್ಲಿರುವ ಕೇಂದ್ರ ಸರ್ಕಾರದ ನೌಕರರು ಮಾತ್ರ ಇದರ ಪ್ರಯೋಜನವನ್ನು ಪಡೆಯಲು ಅರ್ಹರಾಗುತ್ತಾರೆ.

2020-21ನೇ ಸಾಲಿನಲ್ಲಿ ಯಾವುದೇ ನೌಕರ ಕನಿಷ್ಠ ಆರು ತಿಂಗಳ ಕಾಲ ನಿರಂತರ ಸೇವೆಯಲ್ಲಿರಬೇಕು.

ಸೇವೆಯಿಂದ ಹೊರಗುಳಿದಿರುವ, ರಾಜೀನಾಮೆ ನೀಡಿದ ಅಥವಾ 31 ಮಾರ್ಚ್ 2022 ರಂದು ಅಥವಾ ಅದಕ್ಕೂ ಮೊದಲು ನಿವೃತ್ತರಾದ ಉದ್ಯೋಗಿಗಳನ್ನು ವಿಶೇಷ ಪ್ರಕರಣದ ಅಡಿ ಪರಿಗಣಿಸಲಾಗುವುದು.

ವೈದ್ಯಕೀಯ ಕಾರಣಗಳಿಗಾಗಿ ಮಾರ್ಚ್ 31 ರ ಮೊದಲು ಅಸಾಮಾನ್ಯವಾಗಿ ನಿವೃತ್ತಿ ಹೊಂದಿದ ಅಥವಾ ಮರಣ ಹೊಂದಿದವರಿಗೆ ತಾತ್ಕಾಲಿಕ ಬೋನಸ್ ನೀಡಲಾಗುತ್ತದೆ.

ಆದರೆ ಆರ್ಥಿಕ ವರ್ಷದಲ್ಲಿ ಆರು ತಿಂಗಳ ಕಾಲ ನಿಯಮಿತ ಕರ್ತವ್ಯವನ್ನು ಪರಿಗಣಿಸಲಾಗುತ್ತದೆ. ಅಡ್ಹಾಕ್ ಆಧಾರದ ಮೇಲೆ ನೇಮಕಗೊಂಡ ತಾತ್ಕಾಲಿಕ ಉದ್ಯೋಗಿಗಳಿಗೂ ಈ ಬೋನಸ್ ಲಾಭ ಸಿಗಲಿದೆ. ಆದರೆ ಈ ಮಧ್ಯೆ ಅವರ ಸೇವೆಯಲ್ಲಿ ಯಾವುದೇ ಕಡಿತ ಇರಬಾರದು.

ಸಂಬಂಧಪಟ್ಟ ಉದ್ಯೋಗಿಯ ನಿಯಮಿತ ಸೇವೆಯ ಹತ್ತಿರದ ಸಂಖ್ಯೆಯನ್ನು ಆಧರಿಸಿ ‘ಪ್ರೊ ರಾಟಾ ಆಧಾರದ ಮೇಲೆ’ ಅವರಿಗೆ ಬೋನಸ್ ಅನ್ನು ನಿಗದಿಪಡಿಸಲಾಗುತ್ತದೆ.

ಇಷ್ಟೆ ಅಲ್ಲದೆ, ಭಾರತೀಯ ರೈಲ್ವೆಯ 11.27 ಲಕ್ಷ ಉದ್ಯೋಗಿಗಳಿಗೆ 1,832 ಕೋಟಿ ರೂ.ಗಳ ಉತ್ಪಾದಕತೆ ಸಂಬಂಧಿತ ಬೋನಸ್ ನೀಡಲಾಗುತ್ತದೆ.

ಇದು 78 ದಿನಗಳ ಬೋನಸ್ ಆಗಿರುತ್ತದೆ. 17,951 ರೂ. ಈ ಬೋನಸ್​ನ ಗರಿಷ್ಠ ಮಿತಿಯಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

1 ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ದೇಶದ ಪಿಂಚಣಿದಾರರಿಗೆ ಸರ್ಕಾರ ಭರ್ಜರಿ ಉಡುಗೊರೆಯನ್ನು ಘೋಷಿಸಿದೆ.

ಸೆಪ್ಟೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ DR ಅನ್ನು ವರ್ಷಕ್ಕೆ ಎರಡು ಬಾರಿ ಘೋಷಿಸಲಾಗುವುದು ತಿಳಿದಿರುವ ವಿಚಾರವೆ ಆದರೂ ಈ ಅನುಕ್ರಮದಲ್ಲಿ ಭಾರತ ಸರ್ಕಾರವು 28 ಸೆಪ್ಟೆಂಬರ್ 2022 ರಂದು ತುಟ್ಟಿಭತ್ಯೆಯನ್ನು (DA) ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಗಿದೆ ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DOPPW) ಹೇಳಿದ್ದು, ಈಗ ಡಿಆರ್(DR) ಅನ್ನು ಶೇ.34ರಿಂದ 38 ಕ್ಕೆ ಹೆಚ್ಚಿಸಲಾಗಿದೆ.

ಸರ್ಕಾರ ನೌಕರರಿಗೆ ನೆರವಾಗಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಹಬ್ಬದ ಸಂಭ್ರಮ ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ದೀಪಾವಳಿ ಗಿಫ್ಟ್ ಕೊಡಲು ಮುಂದಾಗಿದ್ದು, ಕೇಂದ್ರ ನೌಕರರಿಗೆ ನೆರವಾಗುವುದರಲ್ಲಿ ಸಂಶಯವಿಲ್ಲ.

You may also like

Leave a Comment