Home » 7th Pay Commission: ಸರ್ಕಾರಿ ನೌಕರರೇ ಆಗಸ್ಟ್ ನಿಂದ ಹೆಚ್ಚಾಗೋ ವೇತನವನ್ನು ಈ ರೀತಿ ಚೆಕ್ ಮಾಡಿಕೊಳ್ಳಿ !!

7th Pay Commission: ಸರ್ಕಾರಿ ನೌಕರರೇ ಆಗಸ್ಟ್ ನಿಂದ ಹೆಚ್ಚಾಗೋ ವೇತನವನ್ನು ಈ ರೀತಿ ಚೆಕ್ ಮಾಡಿಕೊಳ್ಳಿ !!

0 comments
7th Pay Commission

7th Pay Commission: ರಾಜ್ಯ ಸರ್ಕಾರಿ ನೌಕರರ ಹಲವು ವರ್ಷಗಳ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಆಗಸ್ಟ್ 1 ರಿಂದಲೇ ಸರ್ಕಾರಿ ನೌಕರರಿಗೆ 7 ವೇತನ ಆಯೋಗ(7th Pay Commission) ಜಾರಿಯಾಗುವಂತೆ ಆದೇಶ ಹೊರಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಹೆಚ್ಚುವರಿ ಸಂಬಳ ಸಿಗೋದು ಪಕ್ಕಾ ಆಗಿದೆ. ಈ ಹಿನ್ನೆಲೆಯಲ್ಲಿ ನೌಕರರ ಸಂತೋಷಕ್ಕೆ ಪಾರವೇ ಇಲ್ಲ. ಎಲ್ಲರೂ ಹೊಸ ಸಂಬಳಕ್ಕಾಗಿ ಕಾಯುತ್ತಿರಬಹುದು.

ಅಂದಹಾಗೆ ಈ ಹೊಸ ಸಂಬಳ ಹಾಗೂ ಹೆಚ್ಟುವರಿ ಸಂಬಳ ಆಗಸ್ಟ್ ನಿಂದ ಕೈ ಸೇರುತ್ತಿದೆ. ಆದರೆ ಹೆಚ್ಚಿನ ನೌಕರರಿಗೆ ತಮ್ಮ ಸಂಬಳದಲ್ಲಿ ಎಷ್ಟು ಹೆಚ್ಚಾಗಿದೆ, ನಮಗೆ ಎಷ್ಟು ಹೆಚ್ಚುವರಿ ಸಂಬಳ ಸಿಗುತ್ತದೆ ಎಂದು ತಿಳಿದಿಲ್ಲ. ಹೀಗಾಗಿ ನಿಮಗೆ ಮುಂದಿನ ತಿಂಗಳಿನಿಂದ 7ನೇ ವೇತನ ಆಯೋಗದಡಿ ಸಿಗುವ ಸಂಬಳ ಎಷ್ಟು ಎಂದು ತಿಳಿಯಲು ಹೀಗೆ ಚೆಕ್ ಮಾಡಿಕೊಳ್ಳಿ.

ಸರ್ಕಾರಿ ನೌಕರರು https://karpay.calculator.cafe/?utm_source=DH-MoreFromPub&utm_medium=DH-app&utm_campaign=DH ವೆಬ್‌ಸೈಟ್ ಮೂಲಕ ವೇತನ ಎಷ್ಟು ಹೆಚ್ಚಳ? ಎಂದು ಲೆಕ್ಕ ಹಾಕಬಹುದು.

ವೇತನ ಶ್ರೇಣಿ ಲೆಕ್ಕ ಹಾಕುವುದು ಹೇಗೆ?:
ದಿನಾಂಕ 01/07/2022ರಲ್ಲಿದ್ದಂತೆ ಮೂಲ ವೇತನ. ದಿನಾಂಕ 01/07/2022ರಲ್ಲಿದ್ದಂತಹ ಬೆಲೆ ಸೂಚ್ಯಂಕ ಹಂತ 361.704ಕ್ಕೆ ಸಂವಾದಿಯಾಗಿ ಲಭ್ಯವಿದ್ದ 31% ತುಟ್ಟಿ ಭತ್ಯೆ. ದಿನಾಂಕ 01/07/2022ರಲ್ಲಿ ಲಭ್ಯವಿದ್ದ ಮೂಲ ವೇತನದ ಮೇಲೆ 27.50% ರಷ್ಟು ಫಿಟ್‌ಮೆಂಟ್‌ ಸೌಲಭ್ಯ ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಲಾಗಿದೆ.

ಅಂದಹಾಗೆ ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಭಾರ ಭತ್ಯೆ ಮಂಜೂರಾತಿಯ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ. ಸಾಮೂಹಿಕ ವಿಮಾ ಯೋಜನೆಗೆ ನೌಕರರ ವಂತಿಗೆ ಹೆಚ್ಚಳದ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ.

Parliament Session: ‘ವಂದೇ ಭಾರತ್’ ಗೆ ಕೊಡುವ ಮಹತ್ವವನ್ನು ಸರ್ಕಾರ ಬಡವರ ರೈಲುಗಳಿಗೇಕೆ ಕೊಡುತ್ತಿಲ್ಲ ?! ರೈಲ್ವೆ ಸಚಿವರು ಹೇಳಿದ್ದಿಷ್ಟು

You may also like

Leave a Comment