BJP: ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ. ಈ ಬೆನ್ನಲ್ಲೇ ಬಿಜೆಪಿಯ ಈ ಎಂಟು ನಾಯಕರಿಗೆ ಉಚ್ಛಾಟನೆಯ ಆತಂಕ ಶುರುವಾಗಿದೆ ಎನ್ನಲಾಗಿದೆ.
ಹೌದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ಅವರು ಸಮರ ಸಾರಿದ್ದ ವೇಳೆ ಅವರಿಗೆ ಸಾತ್ ನೀಡಿದ್ದ ಹಾಗೂ ಇದೀಗ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದ ನಂತರವೂ ಅವರಿಗೆ ಬೆಂಬಲ ನೀಡುತ್ತಿರುವ ಬಿಜೆಪಿಯ ಕೆಲ ನಾಯಕರಿಗೆ ಉಚ್ಚಾಟನೆಯ ಆತಂಕ ಶುರುವಾಗಿದೆ. ಅದರೊಂದಿಗೆ ಬಿಜೆಪಿ ಶಾಸಕರಾಗಿದ್ದರು ಕಾಂಗ್ರೆಸ್ನೊಂದಿಗೆ ಗುರುತಿಸಿಕೊಳ್ಳುತ್ತಿರುವ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರಿಗೂ ಕೂಡ ಇದು ಬಿಸಿ ತುಪ್ಪವಾಗಿದೆ.
ಯಾರಿಗೆಲ್ಲಾ ಆತಂಕ?
01. ರಮೇಶ್ ಜಾರಕಿಹೊಳಿ
02. ಕುಮಾರ್ ಬಂಗಾರಪ್ಪ
03. ಬಿ.ಪಿ ಹರೀಶ್
04. ಜಿ.ಎಂ.ಸಿದ್ದೇಶ್ವರ್
05. ಪ್ರತಾಪ್ ಸಿಂಹ
06. ಅಣ್ಣಾಸಾಹೇಬ ಜೊಲ್ಲೆ
07. ಎಸ್.ಟಿ ಸೋಮಶೇಖರ್
08. ಶಿವರಾಮ್ ಹೆಬ್ಬಾರ್
