Home » Death: 800 ಗ್ರಾಂ ಚಿನ್ನ 70 ಲಕ್ಷ ಬೆಲೆಬಾಳುವ ಕಾರು ಸಾಕಾಗಲಿಲ್ಲ: ವರದಕ್ಷಿಣೆ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವದು

Death: 800 ಗ್ರಾಂ ಚಿನ್ನ 70 ಲಕ್ಷ ಬೆಲೆಬಾಳುವ ಕಾರು ಸಾಕಾಗಲಿಲ್ಲ: ವರದಕ್ಷಿಣೆ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವದು

0 comments

Death: ಕಳೆದ ಏಪ್ರಿಲ್ ನಲ್ಲಿ ಅದ್ದೂರಿಯಾಗಿ ಮದುವೆಯಾಗಿ, 800 ಗ್ರಾಂ ಚಿನ್ನ ಎಪ್ಪತ್ತು ಲಕ್ಷ ಬೆಲೆಬಾಳುವ ಕಾರು ವರದಕ್ಷಿಣೆಯಾಗಿ ನೀಡಿದ್ದರು ಕೂಡ, ಚಿತ್ರಹಿಂಸೆಯಿಂದ ಮನನೊಂದ ನವ ವಿವಾಹಿತೆ ರಿಧನ್ಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳ್ನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ರಿಧನ್ಯಾ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಏಪ್ರಿಲ್ನಲ್ಲಿ 28 ವರ್ಷದ ಕವಿನ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು.

ಭಾನುವಾರ ರಿಧನ್ಯಾ ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಿದ್ದು, ದಾರಿಯಲ್ಲಿ ಆಕೆ ತನ್ನ ಕಾರನ್ನು ನಿಲ್ಲಿಸಿ ಕೀಟನಾಶಕ ಸೇವಿಸಿದ್ದಾರೆ. ಈ ಪ್ರದೇಶದಲ್ಲಿ ತುಂಬಾ ಹೊತ್ತಿನಿಂದ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ರಿಧನ್ಯಾಳ ಬಾಯಿಂದ ನೊರೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರೊಳಗೆ ಪ್ರಾಣ ಬಿಟ್ಟಿದ್ದರು.

ಮೂಲಗಳ ಪ್ರಕಾರಮ ರಿಧನ್ಯಾ ಸಾಯುವ ಮುನ್ನ ತಂದೆಗೆ ವಾಟ್ಸಾಪ್ನಲ್ಲಿ 7 ಆಡಿಯೋ ಸಂದೇಶಗಳನ್ನು ಕಳುಹಿಸಿದ್ದಳು. ಅದರಲ್ಲಿ ತನ್ನ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದಳು.ಗಂಡನ ಮನೆಯಲ್ಲಿ ಕೊಡುತ್ತಿದ್ದ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ.

ಮತ್ತೊಂದು ಸಂದೇಶದಲ್ಲಿ ಬೇರೊಬ್ಬನಿಗೆ ತನ್ನನ್ನು ಮದುವೆ ಮಾಡಿಕೊಡಲು ಅತ್ತೆಯ ಮನೆಯವರು ನಿರ್ಧರಿಸಿದ್ದಾರೆ, ಅವರು ಕೊಡುವ ಹಿಂಸೆ ತಡೆಯಲಾಗುತ್ತಿಲ್ಲ, ಯಾರ ಬಳಿ ಹೇಳಿಕೊಳ್ಳಬೇಕೆಂಬುದು ಗೊತ್ತಿಲ್ಲ ಎಂದು ನೋವಿನಿಂದ ಮಾತನಾಡಿದ್ದಳು.

ಇದನ್ನೂ ಓದಿ:KRS Dam: ಕೆ ಆರ್ ಎಸ್ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಸಿದ್ದರಾಮಯ್ಯ

You may also like