Interesting News: ಗಾದೆ ಮಾತಿಗೆ ಹೇಳಿ ಹೊಲಿಸಿದ ಹಾಗಿದೆ ಈ ಕಥೆ.
ಇಂಗ್ಲಿಷ್ ಚಲನ ಚಿತ್ರಗಳಲ್ಲಿ ತನ್ನದೇ ರೀತಿಯಲ್ಲಿ ಛಾಪು ಮೂಡಿಸಿದ ನಟ ಆಲ್ ಪಚಿನೊ ಈಗ ತನ್ನ 83 ರ ಇಳಿ ವಯಸ್ಸಿನಲ್ಲೂ ಎಲ್ಲರೂ ಬೆರಗಾಗುವಂತಹಾ ಸಾಧನೆ ಮಾಡಿದ್ದಾರೆ: ತನ್ನ 26 ವರ್ಷ ವಯಸ್ಸಿನ ಪ್ರೇಯಸಿಗೆ ಗರ್ಭ ದಾನ ಮಾಡಿ ಜಗತ್ತಿನ ಅತ್ಯಂತ ಹಿರಿಯ ತಂದೆಯಾಗುತ್ತಿದ್ದಾರೆ.
ಹಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಆತನಿಗೆ ಈಗ 83 ವರ್ಷ ವಯಸ್ಸು. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎಂಬ ಮಾತು ಅಲ್ ಪಚಿನೋರಿಗೆ ಪಕ್ಕಾ ಹೊಂದಿಕೆ ಆಗುತ್ತದೆ. ಈ ಇಳಿ ವಯಸ್ಸಿನಲ್ಲೂ (Interesting News) ಆತ ಒಬ್ಬ ಯುವ ಪ್ರೇಯಸಿಯನ್ನು ಪಟಾಯಿಸಿ ಬಿಟ್ಟಿದ್ದಾನೆ. ಆತನ ಗರ್ಲ್ಫ್ರೆಂಡ್ ನೂರ್ ಅಲ್ಫಾಲ್ಲಾ. ಅಚ್ಚರಿ ಏನೆಂದರೆ, ಅಲ್ ಪಚಿನೋ ಪ್ರೇಯಸಿ ನೂರ್ ಅಲ್ಫಾಲ್ಲಾ (Noor Alfallah) ವಯಸ್ಸು ಕೇವಲ 29 ವರ್ಷ ! ನಿಜ ಏನೆಂದರೆ, ಆಕೆಯೇ ಆಸೆಪಟ್ಟು ಈ ಮುದುಕನನ್ನು ವರಿಸಿದ್ದಾಳೆ.
ಇಷ್ಟೇ ಅಲ್ಲ ಈತನ ಸಾಧನೆ. ಈಗ ನೂರ್ ಅಲ್ಫಾಲ್ಲಾ ಪ್ರೆಗ್ನೆಂಟ್ (pregnant) ಗರ್ಭಿಣಿಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ‘ಅದಕ್ಕೆಲ್ಲಾ ಕಾರಣ ನಾನಲ್ಲ’ ಅಂತ ಅಲ್ ಪಚಿನೋ ವಾದಿಸಿ ಬೇಸರ ಪಟ್ಟುಕೊಂಡಿದ್ದಾರೆ. ಜತೆಗೆ ತಮ್ಮ ಪ್ರೇಯಸಿಯ ಮೇಲೆ ಆತನಿಗೆ ಅನುಮಾನ ಕೂಡಾ ಕಾಡಿದೆ.
ಆದರೆ ಆಕೆ ಮಾತ್ರ ನಿಯತ್ತಿನ ಹುಡುಗಿ. ತನ್ನ ಬಾಯ್ ಫ್ರೆಂಡ್ ನ ದುಗುಡ ಏನು ಎಂಬುದು 29ರ ಪ್ರಾಯದ ಸುಂದರಿ ನೂರ್ ಅಲ್ಫಾಲ್ಲಾಗೆ ಅರ್ಥವಾಗಿದ್ದು, ಆಕೆ ಡಿಎನ್ಎ ಟೆಸ್ಟ್ ಮಾಡಿಸಲು ಒಪ್ಪಿಕೊಂಡೆ ಬಿಟ್ಟಿದ್ದಾಳೆ. ಇದೀಗ ಡಿಎನ್ಎ ಟೆಸ್ಟ್ ವರದಿ ಕೂಡಾ ಬಂದಿದ್ದು, ‘ ಪರ್ವಾಗಿಲ್ವೆ, ಮುದುಕ ಸಕತ್ ಸ್ಟ್ರಾಂಗ್ ಅವ್ನೆ ‘ ಅಂತ ಅಲ್ಲಿಯ ಜನ ಮಾತಾಡಿಕೊಳ್ಳುತ್ತಿದ್ದಾರಂತೆ.
ಡಿಎನ್ಎ ಟೆಸ್ಟ್ ಕೂಡ ಮಾಡಿಸಲಾಗಿದ್ದು, ಪರೀಕ್ಷಾ ವರದಿ ಮಾತ್ರ ಸ್ವತಃ ಅಲ್ ಪಚಿನೋಗೆ ಅಚ್ಚರಿ ತಂದಿದ್ದು, ಆತನೇ ಆ ಮಗುವಿನ ತಂದೆ ಎನ್ನೋದು ಸಾಬೀತು ಆಗಿದೆ. ನೂರ್ ಅಲ್ಫಾಲ್ಲಾ ಗರ್ಭಿಣಿ ಆಗಿದ್ದಕ್ಕೆ ತಾವು ಕಾರಣ ಅಲ್ಲ ಎಂಬುದು ಅವರ ಪಚಿನೋರ ವಾದವಾಗಿತ್ತು. 83 ವರ್ಷ ವಯಸ್ಸಿನ ನನಗೆ ಈ ವಯಸ್ಸಿನಲ್ಲಿ ಮಕ್ಕಳಾಗುವುದಿಲ್ಲ ಎಂಬುದು ಪಚಿನೋ ಅವರ ಗಟ್ಟಿ ನಂಬಿಕೆಯಾಗಿತ್ತು. ಇದೇ ಕಾರಣಕ್ಕೆ ಪ್ರೇಯಸಿ ಮೇಲೆ ಅವರಿಗೆ ಅನುಮಾನ ಬಂದಿದೆ. ಆಗಿದ್ದಾಗಲಿ ಟೆಸ್ಟ್ ಮಾಡಿಸಿಯೇ ಬಿಡೋಣ ಅಂತ ಈ ಜೋಡಿ ತೀರ್ಮಾನಿಸಿ. ಕೊನೆಗೂ ಡಿಎನ್ಎ ಪರೀಕ್ಷೆ ನಡೆದಿದ್ದು ಅದರ ಫಲಿತಾಂಶ ಅಚ್ಚರಿ ಮೂಡಿಸಿದೆ. ಪಚಿನೋ ಅವರ ಗಟ್ಟಿ ನಂಬಿಕೆಗಿಂತಲೂ, ಆತನ ಗಂಡಸುತನ ಗಡುಸಾಗಿದ್ದು, ಈಗ ಅವರು ಹೆಮ್ಮೆಯ ತಂದೆಯಾಗುತ್ತಿದ್ದಾರೆ.
ಯಾರೂ ಈ ನಟ ಅಲ್ ಪಚೀನೋ?
ಹಾಲಿವುಡ್ ನ ಈ ದಿಗ್ಗಜ ನಟ ‘ಗಾಡ್ ಫಾದರ್’, ‘ಸೆಂಟ್ ಆಫ್ ಎ ವುಮನ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 1969ರಿಂದಲೂ ಸಕ್ರಿಯವಾಗಿರುವ ಆತನ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿ, ಟೋನಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಅಲ್ಲದೆ ಆತ ಕಿರುತೆರೆ ಮತ್ತು ರಂಗಭೂಮಿಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಪಚಿನೋ ವೈಯಕ್ತಿಕ ಜೀವನ ಕೂಡಾ ರಂಗು ರಂಗಿನದೇ. ಈತನಿಗೆ ಮೂವರು ಮಕ್ಕಳು ಜನಿಸಿದ್ದು ಈಗ 4ನೇ ಮಗುವಿಗೆ ತಂದೆ ಆಗುತ್ತಿದ್ದಾರೆ. ಇನ್ನು, ಅಲ್ ಪಚಿನೋ ಪ್ರೇಯಸಿ ನೂರ್ ಅಲ್ಫಾಲ್ಲಾ ಇತಿಹಾಸ ಕೂಡ ದೊಡ್ಡದು ಮತ್ತು ಮಲ್ಟಿ ಕಲರ್ ನದ್ದು. ತನ್ನ ಕೇವಲ 22 ವಯಸ್ಸಿನಲ್ಲೇ ಅವರು 50 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳ ಜೊತೆ ಆತ ಡೇಟಿಂಗ್ ಮಾಡಿದ್ದರು. ಇದೀಗ ಅಲ್ ಪಚೀನೋ ಜೊತೆ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ ಆತನ ಹಿರಿಯ ಮಗನಿಗೆ ಆಕೆ ತನ್ನ ಗರ್ಭದಲ್ಲಿ ಸ್ಥಾನ ನೀಡಿದ್ದಾಳೆ.
