Home » Deadly Accident: ಮದುವೆ ಮುಗಿಸಿ ಬರುವಾಗ ಕಾರು, ಟ್ರಕ್‌ ಮಧ್ಯೆ ಭೀಕರ ಅಪಘಾತ; 9 ಮಂದಿ ದಾರುಣ ಸಾವು

Deadly Accident: ಮದುವೆ ಮುಗಿಸಿ ಬರುವಾಗ ಕಾರು, ಟ್ರಕ್‌ ಮಧ್ಯೆ ಭೀಕರ ಅಪಘಾತ; 9 ಮಂದಿ ದಾರುಣ ಸಾವು

0 comments
Deadly Accident

Deadly Accident: ರಾಜಸ್ಥಾನದ ಜಲಾವರ್‌ ಜಿಲ್ಲೆಯಲ್ಲಿ ಕಾರು ಮತ್ತು ಟ್ರಕ್‌ ನಡುವೆ ಡಿಕ್ಕಿ ಸಂಭವಿಸಿ ಒಂಭತ್ತು ಜನ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಮಧ್ಯಪ್ರದೇಶದಲ್ಲಿ ಮದುವೆಯಿಂದ ಹಿಂದಿರುಗುವ ಸಂಭವದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: Heart Attack ಹೃದಯಾಘಾತ ಹಾಗೂ ಹೃದಯ ಸ್ತಂಭನದ ನಡುವಿನ ವ್ಯತ್ಯಾಸವೇನು? : ಅದರ ಲಕ್ಷಣಗಳೇನು ? : ಇಲ್ಲಿ ತಿಳಿಯಿರಿ

ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಅಕ್ಲೇರಾ ಬಳಿ ಶನಿವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಚಿಕಿತ್ಸೆ ಸಂದರ್ಭದಲ್ಲಿ ಆರು ಜನ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: Health Insurance: 65 ವರ್ಷ ಮೇಲ್ಪಟ್ಟವರಿಗೂ ಆರೋಗ್ಯ ವಿಮೆ ಸೌಲಭ್ಯ

ಮಾಹಿತಿ ಪ್ರಕಾರ ಮೃತಪಟ್ಟವರು ಬಗ್ರಿ ಸಮುದಾಯದವರು ಎಂದು ಹೇಳಲಾಗಿದೆ. ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅತಿಯಾದ ವೇಗದಿಂದ ಟ್ರಕ್‌ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಟ್ರಕ್‌ ಚಾಲಕ ಪರಾರಿಯಾಗಿದ್ದು, ಗಾಡಿ ಹರ್ಯಾಣ ಮೂಲದ್ದಾಗಿದೆ.

You may also like

Leave a Comment