Home » Rajastan: ಮಗುವಿಗೆ ಜನ್ಮ ನೀಡಿದ 9ನೇ ಕ್ಲಾಸ್ ವಿದ್ಯಾರ್ಥಿನಿ – ಕಾರಣ 10ನೇ ತರಗತಿ ವಿದ್ಯಾರ್ಥಿ !!

Rajastan: ಮಗುವಿಗೆ ಜನ್ಮ ನೀಡಿದ 9ನೇ ಕ್ಲಾಸ್ ವಿದ್ಯಾರ್ಥಿನಿ – ಕಾರಣ 10ನೇ ತರಗತಿ ವಿದ್ಯಾರ್ಥಿ !!

0 comments

Rajastan: ರಾಜಸ್ಥಾನದಲ್ಲಿ ಒಂದು ಅಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು 9ನೇ ತರಗತಿ ವಿದ್ಯಾರ್ಥಿನಿ ಒಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಅಚ್ಚರಿಯೇನೆಂದರೆ ಇದಕ್ಕೆ ಕಾರಣ ಅದೇ ಶಾಲೆಯ 10ನೇ ತರಗತಿಯ ಒಬ್ಬ ವಿದ್ಯಾರ್ಥಿ!!

ಹೌದು, 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ್ದಾನೆ. ಈ ಘಟನೆಯ ಕುರಿತು ಸಂತ್ರಸ್ತೆಯ ದೂರಿನ ಮೇರೆಗೆ, ಪೊಲೀಸರು ಆರೋಪಿ ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಂದಹಾಗೆ ಬಾಲಕಿ 9 ನೇ ತರಗತಿಯಲ್ಲಿ ಮತ್ತು ಆರೋಪಿ 10 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಸಂತ್ರಸ್ತೆಯ ತಾಯಿ ತೀರಿಕೊಂಡಿದ್ದು ತಂದೆ ಇತರ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇದರಿಂದಾಗಿ, ಸಂತ್ರಸ್ತೆ ಗರ್ಭಿಣಿ ಎಂಬ ವಿಷಯ ಬೆಳಕಿಗೆ ಬರಲಿಲ್ಲ ಮತ್ತು ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ಇದೀಗ ಪೊಲೀಸರು ಆರೋಪಿ ಅಪ್ರಾಪ್ತ ವಯಸ್ಕನ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

You may also like