Home » Hyderabad: ಪರೀಕ್ಷಾ ಹಾಲ್‌ನಲ್ಲಿ ಕಾಪಿ ಮಾಡಬೇಡ ಎಂದಿದ್ದಕ್ಕೆ 7ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಹಲ್ಲೆ!

Hyderabad: ಪರೀಕ್ಷಾ ಹಾಲ್‌ನಲ್ಲಿ ಕಾಪಿ ಮಾಡಬೇಡ ಎಂದಿದ್ದಕ್ಕೆ 7ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಹಲ್ಲೆ!

0 comments
Crime

Hyderabad: ಪರೀಕ್ಷಾ ಹಾಲ್‌ನಲ್ಲಿ ನಕಲು ಮಾಡಬೇಡ ಎಂದು ಹೇಳಿದ್ದಕ್ಕೆ ಶಿಕ್ಷಕನ ಮೇಲೆ ವಿದ್ಯಾರ್ಥಿಯೋರ್ವ ಹಲ್ಲೆ ಮಾಡಿರುವ ಘಟನೆ ಬುಧವಾರ ನಡೆದಿದೆ. ಶಿಕ್ಷಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಹೈದರಾಬಾದ್‌ ಬೇಗಂಪೇಟೆಯಲ್ಲಿ ನಕಲು ಮಾಡುವಾಗ ಏಳನೇ ತರಗತಿಯ ಬಾಲಕ ತನ್ನ ಶಾಲಾ ಶಿಕ್ಷಕನ ಮೇಲೆ ಹಲ್ಲೆ ಮಾಡಿರುವ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ. ಗಂಟೆ ಬಾರಿಸಲು ಬಳಸುವ ರಾಡ್‌ನಿಂದ ಶಿಕ್ಷಕ ವೇಣುಗೋಪಾಲ್‌ ಮೇಲೆ ಹಲ್ಲೆ ಮಾಡಲಾಗಿದೆ.

ಈ ಘಟನೆಯಿಂದ ಶಾಕ್‌ಗೊಳಗಾದ ಬಾಲಕನ ಪೋಷಕರು ಕ್ಷಮೆಯಾಚಿಸಿದ್ದಾರೆ. ವಿದ್ಯಾರ್ಥಿಯ ಜೀವನ ಹಾಳು ಮಾಡಲು ಇಷ್ಟಪಡದ ಶಿಕ್ಷಕರು ತಮ್ಮ ದೂರನ್ನು ಹಿಂತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿ ಬಾಲಾಪರಾಧಿಯಾಗಿರುವದರಿಂದ ಬಾಲಕನ ಕುಟುಂಬ ಸದಸ್ಯರಿಗೆ ನೋಟಿಸ್‌ ನೀಡಲಾಗಿದೆ. ತನಿಖೆಯ ನಂತರ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like