Home » White board Car: ವೈಟ್ ಬೋರ್ಡ್ ಕಾರು ಇರೋರಿಗೆ ಬಿಗ್ ಶಾಕ್ – ಈ ಕಾರಣಕ್ಕೆ ನಿಮಗೆ ಬೀಳಲಿದೆ ಭಾರೀ ಮೊತ್ತದ ದಂಡ !

White board Car: ವೈಟ್ ಬೋರ್ಡ್ ಕಾರು ಇರೋರಿಗೆ ಬಿಗ್ ಶಾಕ್ – ಈ ಕಾರಣಕ್ಕೆ ನಿಮಗೆ ಬೀಳಲಿದೆ ಭಾರೀ ಮೊತ್ತದ ದಂಡ !

0 comments
White board Car

White board Car: ವೈಟ್ ಬೋರ್ಡ್ ಕಾರು (White board Car) ಇರೋರಿಗೆ ಬಿಗ್ ಶಾಕ್ ಇಲ್ಲಿದೆ. ನಿಮಗೆ ಈ ಕಾರಣಕ್ಕೆ ಬೀಳಲಿದೆ ಭಾರೀ ಮೊತ್ತದ ದಂಡ. ಹೌದು, ವೈಟ್ ಬೋರ್ಡ್ ಹೊಂದಿರುವ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಬಾಹಿರ ಎಂದು ಸಾರಿಗೆ ಇಲಾಖೆ ಹೇಳುತ್ತಿದೆ. ಕೇವಲ ಎಲ್ಲೋ ಬೋರ್ಡ್ ವಾಹನಗಳು ಮಾತ್ರ ವಾಣಿಜ್ಯ ಸೇವೆಯನ್ನು ಒದಗಿಸಲು ಅನುಮತಿ ನೀಡಲಾಗಿದೆ. ಆದರೆ ಇದೀಗ ವೈಟ್‌ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಈ ರೀತಿಯ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಟ್ಯಾಕ್ಸಿ ಚಾಲಕರು ದೂರು ನೀಡಿದ್ದು, ಆನಂತರ ಬೆಂಗಳೂರಿನ ಸಾರಿಗೆ ಇಲಾಖೆಯು ಇದೀಗ ಕ್ವಿಕ್ ರೈಡ್, ಬ್ಲಾಬ್ಲಾಕಾ‌ ಮುಂತಾದ ಮೊಬೈಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಕಾರ್‌ಪೂಲಿಂಗ್ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.

”ವಾಣಿಜ್ಯ ಉದ್ದೇಶಗಳಿಗೆ ಬಳಸಲು ನಿಷೇಧವಿರುವ ವೈಟ್‌ಬೋರ್ಡ್ ಕಾರುಗಳನ್ನು ಒಟ್ಟುಗೂಡಿಸಿ ಕಾರ್‌ಪೂಲಿಂಗ್ ಅಪ್ಲಿಕೇಶನ್‌ಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ. ಟ್ಯಾಕ್ಸಿ ಚಾಲಕರ ಸಂಘಗಳಿಂದ ದೂರುಗಳು ಹೆಚ್ಚಾಗಿವೆ. ಈ ಅಕ್ರಮ ಕಾರ್ಯಾಚರಣೆಗಳ ವಿರುದ್ಧ ಕ್ರಮ ಕೈಗೊಳ್ಳಲು RTO ಗಳಿಗೆ ಸೂಚಿಸಲಾಗಿದೆ” ಎಂದು ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ್.ಸಿ ಅವರು ಹೇಳಿದರು.

ಇವರಿಗೆ ಆರು ತಿಂಗಳವರೆಗೆ ವಾಹನದ ನೋಂದಣಿ ಪ್ರಮಾಣಪತ್ರವನ್ನು (ಆರ್‌ಸಿ) ಅಮಾನತುಗೊಳಿಸಲಾಗುವುದು. ರೂ. 5,000 ರಿಂದ 10,000 ರೂ. ಗಳವರೆಗೆ ದಂಡವನ್ನು ಒಳಗೊಂಡಿರುವ ಪರಿಣಾಮಗಳನ್ನು ಎದುರಿಸಬಹುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ್,ಸಿ ಎಚ್ಚರಿಕೆ ನೀಡಿದ್ದಾರೆ.

You may also like

Leave a Comment