3
Shivamogga: ಶಿವಮೊಗ್ಗದಲ್ಲಿ ಶಂಕಿತ ಮಂಗನ ಕಾಯಿಲೆಗೆ ಬಾಲಕ ಸಾವಿಗೀಡಾಗಿರುವ ಘಟನೆ ನಡೆದಿದೆ. ತೀರ್ಥಹಳ್ಳಿಯ ದತ್ತರಾಜಪುರದಲ್ಲಿ ಈ ಘಟನೆ ನಡೆದಿದೆ.
8 ವರ್ಷದ ರಚಿತ್ ಮೃತ ಬಾಲಕ.
15 ದಿನಗಳ ಹಿಂದೆ ರಚಿತ್ ಹಾಗೂ ಸಹೋದರಿಗೆ ಮಂಗನ ಕಾಯಿಲೆ ಸೋಂಕು ದೃಢಪಟ್ಟಿತ್ತು. ಇಬ್ಬರನ್ನೂ ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಚಿನ್ ಸಹೋದರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಳು. ಆದರೆ ರಚಿತ್ ಸ್ಥಿತಿ ಹದಗೆಟ್ಟಿತ್ತು. ನಿನ್ನೆ ರಾತ್ರಿ 8.30 ರ ಸುಮಾರಿಗೆ ರಚಿನ್ ಆಸ್ಪತ್ರೆಯಲ್ಲಿಯೇ ಸಾವಿಗೀಡಾಗಿದ್ದಾನೆ.
