Burqa viral Video: ಪ್ರೇಮಿಗಳು ಒಬ್ಬರಿಗೊಬ್ಬರು ಭೇಟಿ ಮಾಡಲು ಹರಾಸಾಹಸ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಪ್ರೇಮಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದ ಭಗ್ನ ಪ್ರೇಮಿಗೆ ಸಿಕ್ಕಿದ್ದು ಬೆನ್ನಿಗೆ ಬಿಸಿ ಬಿಸಿ ಕಜ್ಜಾಯ. ಹೌದು, ಪ್ರೇಯಸಿಯನ್ನು ಭೇಟಿಯಾಗಲು ಬಂದು ಸ್ಥಳೀಯರ ಕೈಯಿಂದ ಧರ್ಮದೇಟು ಸುದ್ದಿ ಬೆಳಕಿಗೆ ಬಂದಿದೆ.
ಹೌದು, ಇಲ್ಲೊಬ್ಬ ಯುವಕ ತನ್ನ ಹುಡುಗಿಯನ್ನು ಭೇಟಿಯಾಗುವ ಸಲುವಾಗಿ ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ಸಿಕ್ಕಿಕೊಂಡಿದ್ದಾನೆ. ಆದ್ರೆ ಈತ ಮಕ್ಕಳ ಕಳ್ಳನೇ ಇರಬೇಕೆಂದು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದ್ದು, ಆಗಸ್ಟ್ 30 ರ ಶನಿವಾರದಂದು ಯುವಕನೊಬ್ಬ ಬುರ್ಖಾ ಧರಿಸಿ ಗೆಳತಿಯನ್ನು ಭೇಟಿಯಾಗಲು ಬಂದಿದ್ದ. ಆತನ ವಿಚಿತ್ರ ವರ್ತನೆಯನ್ನು ಗಮನಿಸಿ ಅನುಮಾನಗೊಂಡ ಸ್ಥಳೀಯರು ಮುಖ ಗವಸು ತೆರೆದಿದ್ದಾರೆ. ನಂತರ ಈತ ಮಕ್ಕಳ ಕಳ್ಳನೇ ಇರಬೇಕೆಂದು ಅಲ್ಲಿನ ಜನ ಹಿಗ್ಗಾಮುಗ್ಗ ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆಯ ವೇಳೆ ಯಾರಿಗೂ ಅನುಮಾನ ಬರಬಾರದೆಂದು ಗೆಳತಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ವಿಡಿಯೋ ಇಲ್ಲಿದೆ
ಸಚಿನ್ ಗುಪ್ತಾ (Sachin Gupta) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ (Burqa viral Video) ಯುವಕನೊಬ್ಬ ಬುರ್ಖಾ ಧರಿಸಿ ಬಂದು ಸ್ಥಳೀಯರ ಕೈಗೆ ತಗ್ಲಾಕೊಂಡ ದೃಶ್ಯವನ್ನು ಕಾಣಬಹುದು. ಈತನ ಮೇಲೆ ಅನುಮಾನಗೊಂಡು ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಆತ ಆಧಾರ್ ಕಾರ್ಡ್ ತೋರಿಸದೇ ಇದ್ದಾಗ, ಈತ ಯಾರೋ ಖತರ್ನಾಕ್ ಕಳ್ಳನೇ ಇರಬೇಕೆಂದು ಜನ ಆತನಿಗೆ ಸರಿಯಾಗಿ ಬಾರಿಸಿದ್ದಾರೆ .
