Home » Sasikanth Senthil: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ʼಕೈʼ ಸಂಸದ ಸಸಿಕಾಂತ್‌ ಪ್ರತಿಕ್ರಿಯೆ

Sasikanth Senthil: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ʼಕೈʼ ಸಂಸದ ಸಸಿಕಾಂತ್‌ ಪ್ರತಿಕ್ರಿಯೆ

0 comments

Sasikanth Senthil: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿನ ಕಾಂಗ್ರೆಸ್‌ ಸಂಸದ ಸಸಿಕಾಂತ್‌ ಸೆಂಥಿಲ್‌ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಜನಾರ್ದನ ರೆಡ್ಡಿ ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕೈ ಸಂಸದ ಸಸಿಕಾಂತ್‌ ಸೆಂಥಿಲ್‌ ಜನಾರ್ದನ ರೆಡ್ಡಿ ಹೇಳಿಕೆಗಳು ಆಧಾರ ರಹಿತ, ಅದರಲ್ಲಿ ಯಾವುದೇ ಸತ್ಯವಿಲ್ಲ. ಬಳ್ಳಾರಿಯಲ್ಲಿ ನಾನು ಸಹಾಯಕ ಆಯುಕ್ತನಾಗಿದ್ದಾಗ ಅವರ ಅಪರಾಧಗಳನ್ನ ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಕೆಲಸದ ಭಾಗವಾಗಿ ನಾನು ಇದನ್ನು ಮಾಡಿದ್ದೇನೆ. ಬಹುಶಃ ಆ ಕಾರಣಗಳಿಂದ ನನ್ನ ಮೇಲೆ ಈ ಆರೋಪ ಮಾಡಿರಬಹುದು. ಇದನ್ನ ಹೊರತುಪಡಿಸಿ ಇದು ಬಿಜೆಪಿಯ ಹತಾಶ ರಾಜಕೀಯವಾಗಿರಬಹುದು ಎಂದು ಪಬ್ಲಿಕ್‌ ಟಿವಿಗೆ ಹೇಳಿದ್ದಾರೆ.

ಇತ್ತಿಚೇಗೆ ಕರ್ನಾಟಕದಲ್ಲಿ ಹೊರ ಬಂದ ʻವೋಟ್ ಚೋರಿʼ ಪ್ರಕರಣದ ಗಮನವನ್ನ ಬೇರೆಡೆ ಸೆಳೆಯುವ ಪ್ರಯತ್ನಕ್ಕಾಗಿ ರೆಡ್ಡಿ ಆರೋಪ ಮಾಡಿರಬಹುದು. ವದಂತಿಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

Mysore Dasara: ಅರಮನೆ ಆವರಣದಲ್ಲಿ ಜಂಬೂ ಸವಾರಿ ವೀಕ್ಷಣೆಗೆ 48,000 ಮಂದಿಗೆ ಅವಕಾಶ – ಈ ಸಂಖ್ಯೆಯಲ್ಲಿ ಒಂದೇ ಒಂದು ಹೆಚ್ಚಾಗಲು ಬಿಡಲ್ಲ: ಡಿಸಿ

You may also like