Home » Love breakup: ಬ್ರೇಕಪ್ ಆಗೋಯ್ತು ಸರ್! ನೋವು ಮರೆಯೋಕೆ ಒಂದು ವಾರ ರಜೆ ಕೊಡಿ ಎಂದ ಪಾಗಲ್ ಪ್ರೇಮಿ!

Love breakup: ಬ್ರೇಕಪ್ ಆಗೋಯ್ತು ಸರ್! ನೋವು ಮರೆಯೋಕೆ ಒಂದು ವಾರ ರಜೆ ಕೊಡಿ ಎಂದ ಪಾಗಲ್ ಪ್ರೇಮಿ!

0 comments

Love breakup: ಪ್ರೀತಿಯಲ್ಲಿ ಆಗುವ ಬ್ರೇಕಪ್ (Love breakup) ಗಾಯ ತುಂಬಾ ದೊಡ್ಡದು ಅನ್ನೋದಕ್ಕೆ ಇಲ್ಲಿದೆ ನೋಡಿ ಒಂದು ಪ್ರತ್ಯಕ್ಷ ಉದಾಹರಣೆ. ಪಾಪ, ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಹುಡುಗಿಯನ್ನು ಹುಚ್ಚು ಹುಚ್ಚಾಗಿ ಪ್ರೀತಿಸಿ ಇದೀಗ ಬಾಸ್ ಮೇಲೆ ಟೆನ್ಷನ್ ಹೊರೆ ಹೇರಿದ್ದಾನೆ.

ಯಾಕಂದ್ರೆ Gen Z ಉದ್ಯೋಗಿ ಬ್ರೇಕಪ್ ನೋವಿನಿಂದ ಹೊರಬರಲು ಬರೋಬ್ಬರಿ 1 ವಾರದ ರಜೆಯನ್ನು ತೆಗೆದುಕೊಂಡಿದ್ದಾನೆ. ಇದರಿಂದ ಆತನಿಗೆ ಕಂಪನಿ ಕೆಲಸದ ಬಗ್ಗೆ, ಬಾಸ್ ಬಗ್ಗೆ ಚಿಂತೆ ಇಲ್ಲ. ತನ್ನ ಪ್ರೀತಿ ಅದಕ್ಕಿಂತ ದೊಡ್ಡದು ಅಂದುಕೊಂಡಿದ್ದಾನೆ.

ಒಟ್ಟಿನಲ್ಲಿ ಕಂಪೆನಿ ಮ್ಯಾನೇಜರ್ Gen Z ಉದ್ಯೋಗಿಯ ಬ್ರೇಕಪ್ ಲವ್ ಸ್ಪೋರಿಯನ್ನು ಕೃಷ್ಣ ಮೋಹನ್ (KiMoJiRa) ಎಂಬವರು ಈ ಪೋಸ್ಟ್ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ “ನನ್ನ ತಂಡದ Gen Z ಸದಸ್ಯರೊಬ್ಬರು ಇದ್ದಕ್ಕಿದ್ದಂತೆ 1 ವಾರಗಳ ಕಾಲ ರಜೆ ಬೇಕೆಂದು ಕೇಳಿದರು. ಇದು ಮೀಟಿಂಗ್ ಮತ್ತು ಪ್ಲಾನಿಂಗ್ಸ್‌ಗಳ ನಿರ್ಣಾಯಕ ಸಮಯ ಆಗಿದ್ದರಿಂದ ರಜೆ ತೆಗೆದುಕೊಳ್ಳಬೇಡಿ ಎಂದು ನಾನು ಹೇಳಿದೆ. ಆದ್ರೆ ಅವರು ಹಠ ಹಿಡಿದು ನನಗೆ ಒಂಟಿಯಾಗಿರಬೇಕು ಎಂದು ರಜೆ ತೆಗೆದುಕೊಂಡರು” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.

You may also like

Leave a Comment