2
Dharmasthala: ಧರ್ಮಸ್ಥಳದಲ್ಲಿ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.30ರಂದು ಎರಡನೇ ದಿನದ ಉತ್ಪನನ ಕಾರ್ಯ ನಡೆಯಲಿದೆ. ಆದರೆ ಉತ್ಪನನವನ್ನು ತೀವ್ರಗತಿಯಲ್ಲಿ ಮಾಡಲು ಎಸ್ ಐ ಟಿ ನಿರ್ಧರಿಸಿದ್ದು, ಒಂದಕ್ಕಿಂತ ಹೆಚ್ಚು ತಂಡಗಳನ್ನು ರಚಿಸಿ ಎಸ್ ಐ ಟಿ ಇಂದು ಅಗೆಯುವ ಕಾರ್ಯಕ್ಕೆ ಮುಂದಾಗುವ ಸಾದ್ಯತೆಯಿದೆ.
ಇದಕ್ಕಾಗಿ ಪುತ್ತೂರು ಮತ್ತು ಮಂಗಳೂರು ಎಸಿಯ ಸಾಥ್ ಪಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮುಖ್ಯವಾಗಿ ಮೀಸಲು ಅರಣ್ಯದಲ್ಲಿ ಅಗೆಯುವ ಕಾರ್ಯ ಮುಂದುವರೆಯಲಿದ್ದು, ಜೆಸಿಬಿ ಬಳಸದೇ ಮಾನವ ಶ್ರಮದಿಂದಲೇ ಅಗೆಯಿಸುವ ಸಾಧ್ಯತೆ ಹೆಚ್ಚಿದೆ.
