Home » Sullia: ಸುಳ್ಯ: ಚಲಿಸುತ್ತಿದ್ದ ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಂಭೀರ ಗಾಯ!

Sullia: ಸುಳ್ಯ: ಚಲಿಸುತ್ತಿದ್ದ ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಂಭೀರ ಗಾಯ!

0 comments

Sullia: ಸುಳ್ಯದ (Sullia) ಉಬರಡ್ಕದ ಹುಳಿಯಡ್ಕ ಎಂಬಲ್ಲಿ ದ್ವಿಚಕ್ರ ವಾಹನದ ಮೇಲೆ ಕಡೆವೆಯೊಂದು ಹಾರಿದ ಪರಿಣಾಮ ಸವಾರರು ಬೈಕಿನಿಂದ ಬಿದ್ದು ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.

ಉಬರಡ್ಕದ ಬಳ್ಳಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ನೀರು ಹಾಕಲೆಂದು ಸುಳ್ಯ ಕಡೆಯಿಂದ ಭಾನುಪ್ರಕಾಶ್‌ ಮತ್ತು ಶಿವಪ್ರಸಾದ್‌ ಅವರು ದ್ವಿಚಕ್ರ ವಾಹನದಲ್ಲಿ ಸಂಜೆ ಸಂಚರಿಸುತ್ತಿದ್ದಾಗ ಹುಳಿಯಡ್ಕದಲ್ಲಿ ಕಡವೆ ಏಕಾಏಕಿ ರಸ್ತೆಗೆ ಬಂದು ದ್ವಿಚಕ್ರ ವಾಹನದ ಮೇಲೆಯೇ ಜಿಗಿದಿದೆ. ಈ ಪರಿಣಾಮ ದ್ವಿಚಕ್ರ ವಾಹನದೊಂದಿಗೆ ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

You may also like

Leave a Comment