Home » ಮದುವೆಯ ಮನೆಗೆ ಆವರಿಸಿತು ಸೂತಕದ ಛಾಯೆ| ಮಗಳ‌ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಂದೆ ನೇಣಿಗೆ ಶರಣು| ಕಾರಣ ಕೇಳಿದರೆ ಶಾಕ್ ಆಗ್ತೀರಾ!!

ಮದುವೆಯ ಮನೆಗೆ ಆವರಿಸಿತು ಸೂತಕದ ಛಾಯೆ| ಮಗಳ‌ ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ತಂದೆ ನೇಣಿಗೆ ಶರಣು| ಕಾರಣ ಕೇಳಿದರೆ ಶಾಕ್ ಆಗ್ತೀರಾ!!

0 comments

ಮಕ್ಕಳ ಮದುವೆ ಅನ್ನೋದು ಹೆತ್ತವರ ಕನಸುಗಳ ಖಜಾನೆ ಆಗಿರುತ್ತದೆ. ಅಲ್ಲಿಯವರೆಗೆ ಸಾಕಿ,ಸಲಹಿ ಕೊನೆಗೆ ಮಕ್ಕಳ ಮದುವೆಯ ದಿನ ಎಂದರೆ ಹೆತ್ತವರಿಗೆ ಮತ್ತು ಮಕ್ಕಳಿಗೂ ಅದೊಂದು ಅದ್ಭುತ ಕ್ಷಣವಾಗಿರುತ್ತದೆ. ಆದರೆ ಇಲ್ಲಿ ನಡೆದಿರುವ ಘಟನೆಯಲ್ಲಿ ಆ ಸಂತೋಷದ ಕ್ಷಣ ಸೂತಕದ ಕ್ಷಣವಾಗಿ ಮಾರ್ಪಟ್ಟಿದೆ. ಕಾರಣ ಮಗಳ ಮದುವೆಯ ದಿನದಂದೆ ತಂದೆ ಆತ್ಮಹತ್ಯೆ ಶರಣಾಗಿದ್ದಾರೆ. ಇನ್ನೂ ಈ ದುರ್ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಲಖನೌ ಹೊರವಲಯದ ಮೋಹನ್‌ಲಾಲ್‌ಗಂಜ್ ಪ್ರದೇಶದ ಟೆಕ್ರಾಸಾನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುನೀಲ್ ಕುಮಾರ್ ದ್ವಿವೇದಿ (58) ಎಂಬಾತ ತನ್ನ ಮಗಳ ಮದುವೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತನ ಆತ್ಮಹತ್ಯೆಗೆ ಒಂದು ಕಾರಣವಿತ್ತು ಅದೇನೆಂದರೆ, ಕುಡಿತದ ಚಟವಿದ್ದ ಸುನೀಲ್ ಮಗಳ‌ ಮದುವೆಯ ದಿನದಂದು ಕೂಡ ಕುಡಿದುಕೊಂಡು ಬಂದಿದ್ದಕ್ಕೆ ಬೈದಿದ್ದರು. ಇದರಿಂದ ಬೇಸರಗೊಂಡು ಈತ ತನ್ನ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾನೆ. ನಂತರ ಸಂಬಂಧಿಕರು ಕೋಣೆಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮದುಮಗಳ ತಂದೆ ಸುನೀಲ್ ಕುಮಾರ್ ಮನೆಯವರ ವಿರೋಧವಿದ್ದರೂ ತನ್ನ ಕುಡಿತದ ಚಾಳಿಯನ್ನು ಬಿಟ್ಟಿರಲಿಲ್ಲ. ಪ್ರತಿದಿನ ಕುಡಿಯುತ್ತಿದ್ದ , ಭಾನುವಾರ ತನ್ನ ಮಗಳ ಮದುವೆ ಇದ್ದರೂ ಕೂಡ ಮದುವೆಯ ಹಿಂದಿನ ದಿನ ಶನಿವಾರವೂ ಕುಡಿದುಕೊಂಡೇ ಮನೆಗೆ ಬಂದಿದ್ದ. ಇದಿಷ್ಟೇ ಅಲ್ಲದೆ ಮದುವೆಗೆ ಬಂದಿದ್ದ ಸಂಬಂಧಿಕರಿಗೂ ಕುಡಿದ ಮತ್ತಿನಲ್ಲಿ ಬೈದಿದ್ದ. ಆತನ ಬೈಗುಳಕ್ಕೆ ಪ್ರತಿಯಾಗಿ ಸಂಬಂಧಿಕರು ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಮೃತನ ಪುತ್ರ ಅಂಕುರ್ ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment